ನವದೆಹಲಿ: ಐಪಿಎಲ್ನ ಹೊಸ ತಂಡಗುಜರಾತ್ ಟೈಟನ್ಸ್ ತಂಡದನಾಯಕ ಹಾರ್ದಿಕ್ ಪಾಂಡ್ಯಅವರು ಸಂಪೂರ್ಣ ಫಿಟ್ ಆಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಹಾರ್ದಿಕ್, ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುವಾಗ ವಿಭಿನ್ನ ಶೈಲಿಯನ್ನು ಮೈಗೂಡಿಸಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

‘ಹಾರ್ದಿಕ್ ಈಗ ತಂಡದ ನಾಯಕರಾಗಿರುವುದರಿಂದ ಅವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಜತೆಗೆ, ಅವರು ಐಪಿಎಲ್ ಟೂರ್ನಿಯುದ್ಧಕ್ಕೂ ಫಿಟ್ನೆಸ್ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಪ್ರೇಕ್ಷಕರನ್ನು ರಂಜಿಸುವಲ್ಲಿ ಹಾರ್ದಿಕ್ ಪ್ರಮುಖ ಪಾತ್ರವಹಿಸಲಿದ್ದಾರೆ’ ಎಂದು ಶಾಸ್ತ್ರಿ ತಿಳಿಸಿದ್ದಾರೆ.

ಸೋಮವಾರ ನಡೆದ ಐಪಿಎಲ್ ಟೂರ್ನಿಯ 4ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಹಾರ್ದಿಕ್ ನಾಯಕತ್ವದ ಗುಜರಾತ್ ಟೈಟನ್ಸ್ 5 ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು.

ಓದಿ...IPL 2022 | RCB ಟ್ರೋಫಿ ಗೆದ್ದರೆ ಮೊದಲು ಮನಸ್ಸಿನಲ್ಲಿ ಮೂಡುವುದು ಎಬಿಡಿ: ಕೊಹ್ಲಿ

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಖನೌ ಸೂಪರ್ ಜೈಂಟ್ಸ್, ದೀಪಕ್ ಹೂಡಾ (55) ಹಾಗೂ ಯುವ ಬ್ಯಾಟರ್ ಆಯುಷ್ ಬದೋನಿ (54) ಸಮಯೋಚಿತ ಅರ್ಧಶತಕಗಳ ನೆರವಿನಿಂದ 158 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್, ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಗುರಿ ತಲುಪಿತ್ತು.

ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದಹಾರ್ದಿಕ್ 37 ರನ್ ನೀಡಿದ್ದರು. ಜತೆಗೆ 28 ಎಸೆತಗಳನ್ನು ಎದುರಿಸಿದ್ದ ಅವರು 33 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.

ಓದಿ...IPL 2022: ತಂಡದಲ್ಲಿ ಉಳಿಸಿಕೊಳ್ಳದ ‘ಆರ್ಸಿಬಿ’ ಬಗ್ಗೆ ಚಾಹಲ್ ಹೇಳಿದ್ದೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.