ಮುಂಬೈ:ಐಪಿಎಲ್–2022ರಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಯುವ ಆಟಗಾರ ತಿಲಕ್ ವರ್ಮಾ ಶೀಘ್ರವೇ ಭಾರತ ಕ್ರಿಕೆಟ್ ತಂಡದ ಪರ ಎಲ್ಲ ಮಾದರಿಯಲ್ಲಿ ಆಡಲಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಹೇಳಿದ್ದರು. ಇದೇ ಮಾತನ್ನು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಪುನರುಚ್ಚರಿಸಿದ್ದಾರೆ.

ತಿಲಕ್ ಕುರಿತು ಸ್ಟಾರ್ ಸ್ಪೋರ್ಟ್ಸ್‌ಗೆ ಪ್ರತಿಕ್ರಿಯಿಸಿರುವ ಗವಾಸ್ಕರ್, 'ತಿಲಕ್ ವರ್ಮಾ ಅವರ ಸ್ವಭಾವ ಅದ್ಭುತವಾದದ್ದು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ವರ್ಮಾ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ತೆರಳಿದರು. ಆ ವೇಳೆ ಒಂದು, ಎರಡು ರನ್ ಗಳಿಸುತ್ತಾ ಆ ಸಂದರ್ಭವನ್ನು ನಿಭಾಯಿಸಿದ ರೀತಿ ಗಮನಾರ್ಹವಾದದ್ದು' ಎಂದು ಹೇಳಿದ್ದಾರೆ.

ಮುಂದುವರಿದು, ಉತ್ತಮ ಹೊಡೆತಗಳ ಮೂಲಕ ನಿರಂತರವಾಗಿ ಸ್ಟ್ರೈಕ್ ರೊಟೇಟ್ ಮಾಡಿದರು. ಅವರಲ್ಲಿ ಉತ್ತಮ ಕ್ರಿಕೆಟ್ ಜ್ಞಾನವಿದೆ ಎಂಬುದನ್ನು ಇದು ತೋರಿಸುತ್ತದೆ. ನನ್ನ ಪ್ರಕಾರ ಇದು ಮುಖ್ಯವಾದದದ್ದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:IPL 2022: ಕೊಹ್ಲಿ, ರೋಹಿತ್ ಕಳಪೆ ಬ್ಯಾಟಿಂಗ್ ಬಗ್ಗೆ ಚಿಂತೆಯಿಲ್ಲ: ಗಂಗೂಲಿ

ಹೈದರಾಬಾದ್‌ನ ಈ ಆಟಗಾರ ಭಾರತ ಪರ ಎಲ್ಲ ಮಾದರಿಯಲ್ಲಿ ಆಡಲಿದ್ದಾರೆ ಎಂಬ ರೋಹಿತ್ ಶರ್ಮಾ ಹೇಳಿಕೆಯನ್ನು ಗವಾಸ್ಕರ್ ಒಪ್ಪಿಕೊಂಡಿದ್ದಾರೆ. 'ಆತ (ತಿಲಕ್ ವರ್ಮಾ) ಎಲ್ಲ ಮಾದರಿಯಲ್ಲಿಯೂ ಭಾರತ ತಂಡದ ಆಟಗಾರನಾಗಲಿದ್ದಾರೆ ಎಂದು ರೋಹಿತ್ ಶರ್ಮಾ ಸರಿಯಾಗಿ ಗುರುತಿಸಿದ್ದಾರೆ. ಹಾಗಾಗಿ, ಮತ್ತಷ್ಟು ಪರಿಶ್ರಮ ಹಾಕಿ ಆಡುವುದು, ಫಿಟ್‌ನೆಸ್ಟ್ ಕಾಯ್ದುಕೊಳ್ಳುವುದು, ತಂತ್ರಗಾರಿಕೆಯನ್ನು ಉತ್ತಮ ಪಡಿಸಿಕೊಳ್ಳುವುದು ಮತ್ತು ರೋಹಿತ್ ಮಾತನ್ನು ಸತ್ಯ ಎಂದು ಸಾಬೀತು ಮಾಡುವುದು ಅವರಿಗೆ ಬಿಟ್ಟದ್ದು' ಎಂದು ನುಡಿದಿದ್ದಾರೆ.

ರೋಹಿತ್ ನಾಯಕರಾಗಿರುವ ಮುಂಬೈ ಇಂಡಿಯನ್ಸ್ ಪರ ಈ ಬಾರಿಯ ಐಪಿಎಲ್‌ನಲ್ಲಿ 12 ಪಂದ್ಯಗಳಲ್ಲಿ ಆಡಿರುವ ತಿಲಕ್, 40.88ರ ಸರಾಸರಿಯಲ್ಲಿ 368 ರನ್ ಗಳಿಸಿದ್ದಾರೆ.

ಮೇ 12ರಂದುಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ, ಕೇವಲ 97 ರನ್ ಗಳಿಸಿ ಆಲೌಟ್ ಆಗಿತ್ತು. ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. 34 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ತಿಲಕ್, 32 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 34 ರನ್ ಗಳಿಸಿ ಮಿಂಚಿದ್ದರು. ಹೀಗಾಗಿ ರೋಹಿತ್ ಪಡೆ 5 ವಿಕೆಟ್ ಅಂತರದ ಸುಲಭ ಜಯ ಸಾಧಿಸಲು ಸಾಧ್ಯವಾಗಿತ್ತು.

ಇದನ್ನೂ ಓದಿ:ಸದ್ಯದಲ್ಲೇ ತಿಲಕ್ ವರ್ಮಾ ಭಾರತದ ಪರ ಆಡಲಿದ್ದಾರೆ: ರೋಹಿತ್ ಶ್ಲಾಘನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.