ಮುಂಬೈ: ರಾಬಿನ್ ಉತ್ತಪ್ಪ (50) ಹಾಗೂ ಶಿವಂ ದುಬೆ (49) ಆಕ್ರಮಣಕಾರಿ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 210 ರನ್ಗಳ ಸವಾಲಿನ ಮೊತ್ತ ಪೇರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಚೆನ್ನೈಗೆ ಆರಂಭದಲ್ಲೇ ಋತುರಾಜ್ ಗಾಯಕವಾಡ್ (1) ವಿಕೆಟ್ ನಷ್ಟವಾಯಿತು. ವಿಕೆಟ್ನ ಇನ್ನೊಂದು ತುದಿಯಿಂದ ರಾಬಿನ್ ಉತ್ತಪ್ಪ ಆಕ್ರಮಣಕಾರಿ ಆಟವಾಡುವ ಮೂಲಕ ಗಮನ ಸೆಳೆದರು.

ಇದನ್ನೂ ಓದಿ:IPL 2022 LSG vs CSK: ವಿಂಟೇಜ್ ಉತ್ತಪ್ಪ; 25 ಎಸೆತಗಳಲ್ಲಿ ಫಿಫ್ಟಿ ಸಾಧನೆ

ಲಖನೌ ಬೌಲರ್ಗಳನ್ನು ದಂಡಿಸಿದ ಉತ್ತಪ್ಪ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅವರಿಗೆ ಮೊಯಿನ್ ಅಲಿ (35) ಉತ್ತಮ ಸಾಥ್ ನೀಡಿದರು. ಅಲ್ಲದೆ ಎರಡನೇ ವಿಕೆಟ್ಗೆ 56 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.

27 ಎಸೆತಗಳನ್ನು ಎದುರಿಸಿದ ಉತ್ತಪ್ಪ ಇನ್ನಿಂಗ್ಸ್ನಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ಬಳಿಕ ಶಿವಂ ದುಬೆ ಬಿರುಸಿನ ಆಟವನ್ನು ಪ್ರದರ್ಶಿಸಿದರು. ಅವರಿಗೆ ಅಂಬಟಿ ರಾಯುಡು (27) ಉತ್ತಮ ಬೆಂಬಲ ನೀಡಿದರು.

ಆದರೆ ಕೇವಲ ಒಂದು ರನ್ ಅಂತರದಲ್ಲಿ ದುಬೆ ಅರ್ಧಶತಕ ವಂಚಿತರಾದರು. 30 ಎಸೆತಗಳನ್ನು ಎದುರಿಸಿದ ದುಬೆ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು.

ಅಂತಿಮ ಹಂತದಲ್ಲಿ ನಾಯಕ ರವೀಂದ್ರ ಜಡೇಜ (17) ಹಾಗೂ ಮಹೇಂದ್ರ ಸಿಂಗ್ ಧೋನಿ (16*) ನೆರವಿನಿಂದ ಚೆನ್ನೈಏಳು ವಿಕೆಟ್ ನಷ್ಟಕ್ಕೆ 210 ರನ್ ಪೇರಿಸಿತು. ಕೇವಲ ಆರು ಎಸೆತಗಳನ್ನು ಎದುರಿಸಿದ ಧೋನಿ, ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.

ಪಂಜಾಬ್ ಪರ ಎರಡು ವಿಕೆಟ್ ಪಡೆದ ರವಿ ಬಿಷ್ಣೋಯಿ ಪ್ರಭಾವಿ ಎನಿಸಿಕೊಂಡರು. ಇತರೆಲ್ಲ ಬೌಲರ್ಗಳು ದುಬಾರಿ ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.