ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ 172 ರನ್ಗಳ ಅಗತ್ಯವಿದೆ.

ಅಮೋಘ ಆಟವಾಡಿದ ಮುಂಬೈನ ತಿಲಕ್ ವರ್ಮಾ 84 ರನ್ ಗಳಿಸಿ ಔಟಾಗದೆ ಉಳಿದರು.

ಟಾಸ್ ಗೆದ್ದ ಆರ್ಸಿಬಿ ನಾಯಕ ಫಫ್ ಡುಪ್ಲೆಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸರಿ ಎಂದು ಸಾಬೀತು ಮಾಡಿದ ಬೌಲರ್ಗಳು ಆರಂಭದಲ್ಲೇ ಮುಂಬೈ ಓಟಕ್ಕೆ ಕಡಿವಾಣ ಹಾಕಿದರು. 8.5 ಓವರ್ಗಳಲ್ಲಿ 48 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡ ಮುಂಬೈ ಸಂಕಷ್ಟಕ್ಕೆ ಒಳಗಾಯಿತು.

ನಾಯಕ ರೋಹಿತ್ ಶರ್ಮಾ (1), ಇಶಾನ್ ಕಿಶನ್ (10), ಕ್ಯಾಮರೂನ್ ಗ್ರೀನ್ (5) ಹಾಗೂ ಸೂರ್ಯಕುಮಾರ್ ಯಾದವ್ (15) ವೈಫಲ್ಯ ಅನುಭವಿಸಿದರು.

ಪವರ್ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ರೀಸ್ ಟಾಪ್ಲಿ ನಿಖರ ದಾಳಿ ಸಂಘಟಿಸುವ ಮೂಲಕ ಗಮನ ಸೆಳೆದರು.

ತಿಲಕ್ ಬಿರುಸಿನ ಅರ್ಧಶತಕ...
ಐದನೇ ವಿಕೆಟ್ಗೆ 50 ರನ್ಗಳ ಜೊತೆಯಾಟ ಕಟ್ಟಿದ ತಿಲಕ್ ವರ್ಮಾ ಹಾಗೂ ನೇಹಲ್ ವಡೇರಾ (21) ಮುಂಬೈಗೆ ಆಸರೆಯಾದರು. ಬಳಿಕ ಕ್ರೀಸಿಗಿಳಿದ ಟಿಮ್ ಡೇವಿಡ್ (4) ಹಾಗೂ ಹೃತೀಕ್ ಶೋಕಿನ್ (5) ಯಶಸ್ವಿ ಕಾಣಲಿಲ್ಲ.

ಅತ್ತ ದಿಟ್ಟ ಹೋರಾಟ ನೀಡಿದ ತಿಲಕ್, ಕೇವಲ 46 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳ ನೆರವಿನಿಂದ 84 ರನ್ ಗಳಿಸಿ ಔಟಾಗದೆ ಉಳಿದರು.

ಅವರಿಗೆ ತಕ್ಕ ಸಾಥ್ ನೀಡಿದ ಅರ್ಷದ್ ಖಾನ್ 15 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೆ ಎಂಟನೇ ವಿಕೆಟ್ಗೆ ತಿಲಕ್ ಜೊತೆ 48 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.

ಪರಿಣಾಮ ಮುಂಬೈ ಏಳು ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತು. ಆರ್ಸಿಬಿ ಪರ ಕರ್ಣ್ ಶರ್ಮಾ ಎರಡು ಮತ್ತು ಸಿರಾಜ್, ಟಾಪ್ಲಿ, ಆಕಾಶ್ ದೀಪ್, ಹರ್ಷಲ್ ಪಟೇಲ್ ಹಾಗೂ ಮೈಕಲ್ ಬ್ರೇಸ್ವೆಲ್ ತಲಾ ಒಂದು ವಿಕೆಟ್ ಕಬಳಿಸಿದರು.

ಟಾಪ್ಲಿಗೆ ಗಾಯ...
ಈ ನಡುವೆ ಫೀಲ್ಡಿಂಗ್ ವೇಳೆ ರೀಸ್ ಟಾಪ್ಲಿ ಗಾಯ ಮಾಡಿಕೊಂಡರು. ಇದರಿಂದಾಗಿ ಆರ್ಸಿಬಿ ಹಿನ್ನಡೆ ಎದುರಿಸಿತು. ಕೇವಲ ಎರಡು ಓವರ್ ಬೌಲಿಂಗ್ ಮಾಡಿದ ಟಾಪ್ಲಿ, 14 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.