ನವದೆಹಲಿ: 43ರ ಹರೆಯದಲ್ಲೂ ಯುವ ಕ್ರಿಕೆಟಿಗರಿಗಿಂತಲೂ ತಾವೇನೂ ಕಡಿಮೆಯೇನಲ್ಲ ಎಂಬ ರೀತಿಯಲ್ಲಿ ಈ ಬಾರಿಯ ಐಪಿಎಲ್ನಲ್ಲೂ ಮಹೇಂದ್ರ ಸಿಂಗ್ ಧೋನಿ ಪ್ರದರ್ಶನ ನೀಡಿದ್ದಾರೆ.

ಐದು ಬಾರಿಯ ಚಾಂಪಿಯನ್ ಮಹೇಂದ್ರ ಸಿಂಗ್ ಧೋನಿ, ಪ್ರಸಕ್ತ ಸಾಲಿನ ಆರಂಭಕ್ಕೂ ಮುನ್ನ ನಾಯಕತ್ವವನ್ನು ಋತುರಾಜ್ ಗಾಯಕವಾಡ್ ಅವರಿಗೆ ಬಿಟ್ಟುಕೊಟ್ಟಿದ್ದರು. ಬಳಿಕ ಓರ್ವ ವಿಕೆಟ್ ಕೀಪರ್ ಬ್ಯಾಟರ್ ಆಗಿ, ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾ ತಂಡದಲ್ಲಿ ಮುಂದುವರಿದಿದ್ದರು.

ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಧೋನಿ 220.55ರ ಸ್ಟ್ರೈಕ್ರೇಟ್ನಲ್ಲಿ 161 ರನ್ ಗಳಿಸಿದ್ದರು.

'ಅತ್ಯಂತ ಕಠಿಣವಾದ ವಿಷಯ ಏನೆಂದರೆ ನಾನು ವರ್ಷವಿಡೀ ಕ್ರಿಕೆಟ್ ಆಡುತ್ತಿಲ್ಲ. ಹಾಗಾಗಿ ಫಿಟ್ ಆಗಿರುವುದೇ ಸವಾಲು. ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಹಾಗೂ ಫಿಟ್ ಆಗಿರುವ ಯುವ ಆಟಗಾರರೊಂದಿಗೆ ಪೈಪೋಟಿ ನಡೆಸಬೇಕು. ವೃತ್ತಿಪರ ಕ್ರಿಕೆಟ್ ಸುಲಭವಲ್ಲ, ನಿಮ್ಮ ವಯಸ್ಸಿಗೆ ಯಾರೂ ರಿಯಾಯಿತಿ ನೀಡುವುದಿಲ್ಲ' ಎಂದು ಮಹಿ ಹೇಳಿದ್ದಾರೆ.

'ನೀವು ಕ್ರಿಕೆಟ್ ಆಡಲು ಬಯಸುದಾದರೆ ಯುವ ಆಟಗಾರರಷ್ಟೇ ಫಿಟ್ ಹೊಂದಿರಬೇಕು. ಹಾಗಾಗಿ ಆಹಾರ ಪದ್ಧತಿ, ತರಬೇತಿ ಎಲ್ಲವೂ ಮುಖ್ಯವೆನಿಸುತ್ತದೆ. ಅದೃಷ್ಟವಶಾತ್ ನಾನು ಸೋಷಿಯಲ್ ಮೀಡಿಯಾದಲ್ಲಿಲ್ಲ' ಎಂದು ಅವರು ಹೇಳಿದ್ದಾರೆ.

ಕೃಷಿ, ಬೈಕ್ ಸವಾರಿ ಹಾಗೂ ವಿಂಟೇಜ್ ಕಾರುಗಳಂತಹ ವಿಷಯಗಳು ಒತ್ತಡವನ್ನು ನಿವಾರಿಸುತ್ತದೆ ಎಂದು ಹೇಳಿದ್ದಾರೆ.

'ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ಬಳಿಕ ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯಲು ಬಯಸಿದ್ದೆ. ಅದೇ ಸಮಯದಲ್ಲಿ ಮಾನಸಿಕವಾಗಿ ಸಕ್ರಿಯರಾಗಲು ಇತರೆ ವಿಷಯಗಳತ್ತ ಗಮನ ಹರಿಸುತ್ತಿದ್ದೆ. ಕೃಷಿ ನನಗೆ ಇಷ್ಟ. ಮೋಟಾರ್ ಬೈಕ್, ವಿಂಟೇಜ್ ಕಾರುಗಳನ್ನು ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ.
.RCB ಆಟಗಾರರಿಗೆ ಹಸ್ತಲಾಘವ ಮಾಡದೇ ತೆರಳಿದ ಧೋನಿ; ತಪ್ಪು ಯಾರದ್ದು?.ಧೋನಿ ಬಾರಿಸಿದ ಸಿಕ್ಸರ್ CSK ಸೋಲಿಗೆ ಕಾರಣವೇ? ದಿನೇಶ್ ಕಾರ್ತಿಕ್ ಹೇಳಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.