ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ.

ಇದೇ ತಿಂಗಳ 19ರಂದು ಕೋಲ್ಕತ್ತದಲ್ಲಿ ಹರಾಜು ನಡೆಯಲಿದ್ದು, ಅಂತಿಮ ಪಟ್ಟಿಯಲ್ಲಿ 332 ಮಂದಿ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮಿಷೆಲ್ ಮಾರ್ಷ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಹಾಗೂ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಅವರು ₹ 2 ಕೋಟಿ ಮೂಲ ಬೆಲೆ ಹೊಂದಿರುವವರ ಪಟ್ಟಿಯಲ್ಲಿದ್ದಾರೆ.

ಭಾರತದ ರಾಬಿನ್ ಉತ್ತಪ್ಪ ಅವರಿಗೆ ₹ 1.5 ಕೋಟಿ ಮೂಲಬೆಲೆ ನಿಗದಿಪಡಿಸಲಾಗಿದೆ.

ಆಸ್ಟ್ರೇಲಿಯಾದ ಆ್ಯರನ್ ಫಿಂಚ್ ಮತ್ತು ಕ್ರಿಸ್ ಲಿನ್, ಭಾರತದ ಪೀಯೂಷ್ ಚಾವ್ಲಾ, ಯೂಸುಫ್ ಪಠಾಣ್ ಮತ್ತು ಜಯದೇವ್ ಉನದ್ಕತ್ ಅವರು ₹1 ಕೋಟಿ ಮೂಲ ಬೆಲೆ ಹೊಂದಿದ್ದಾರೆ.

332

ಅಂತಿಮ ಹರಾಜು ಪಟ್ಟಿಯಲ್ಲಿ ಸ್ಥಾನ ಹೊಂದಿರುವ ಆಟಗಾರರು

73

ಈ ಬಾರಿಯ ಹರಾಜಿನಲ್ಲಿ ಫ್ರಾಂಚೈಸ್ಗಳು ಖರೀದಿಸಬಹುದಾದ ಆಟಗಾರರು

7

ಎರಡು ಕೋಟಿ ಮೂಲ ಬೆಲೆ ಹೊಂದಿರುವವರು

23

ಒಂದು ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರು

183

₹ 20 ಲಕ್ಷ ಮೂಲ ಬೆಲೆ ಪಡೆದಿರುವ ಆಟಗಾರರು. ಇವರು ಒಂದೂ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ.

8

ಮೂವತ್ತು ಲಕ್ಷ ಮೂಲ ಬೆಲೆ ಪಡೆದಿರುವವರು

3

ಹರಾಜಿಗೆ ಲಭ್ಯರಿರುವ ಸಹ ಸದಸ್ಯ ರಾಷ್ಟ್ರಗಳ ಆಟಗಾರರು

10

ಒಂದೂವರೆ ಕೋಟಿ ಮೂಲ ಬೆಲೆ ಪಡೆದಿರುವವರು

7

ನಲವತ್ತು ಲಕ್ಷ ಮೂಲ ಬೆಲೆ ಹೊಂದಿರುವ ಆಟಗಾರರು

29

ಹರಾಜಿನಲ್ಲಿ ಫ್ರಾಂಚೈಸ್ಗಳು ಸೆಳೆದುಕೊಳ್ಳಬಹುದಾದ ವಿದೇಶಿ ಆಟಗಾರರು

186

ಹರಾಜಿಗೆ ಲಭ್ಯರಿರುವಭಾರತದ ಆಟಗಾರರು

143

ಹರಾಜಿಗೆ ಲಭ್ಯರಿರುವ ವಿದೇಶಿ ಆಟಗಾರರು

ಒಟ್ಟು 997 ಮಂದಿ ಹೆಸರು ನೋಂದಾಯಿಸಿದ್ದರು. ಎಂಟು ಫ್ರಾಂಚೈಸ್ಗಳು ತಮಗೆ ಅಗತ್ಯವಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಿವೆ. ಇದರ ಆಧಾರದಲ್ಲಿ 332 ಮಂದಿಯ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ.
–ಐಪಿಎಲ್ ಪ್ರಕಟಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.