ಜೈಪುರ: ಇಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡಕ್ಕೆ 155 ರನ್‌ಗಳ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಲಖನೌ ತಂಡಕ್ಕೆ ನಾಯಕ ಕೆ.ಎಲ್. ರಾಹುಲ್(39), ಕೈಲ್ ಮೇಯರ್ಸ್(51) ಉತ್ತಮ ಆರಂಭ ನೀಡಿದರು. ಬಳಿಕ ಬಂದ ಆಯುಶ್ ಬದೋನಿ(1), ದೀಪಕ್ ಹೂಡಾ(2) ನಿರಾಸೆ ಮೂಡಿಸಿದರು. ಹೀಗಾಗಿ, ಬೃಹತ್ ಮೊತ್ತ ಪೇರಿಸಲು ಲಖನೌ ತಂಡಕ್ಕೆ ಸಾಧ್ಯವಾಗಲಿಲ್ಲ.

ಮಾರ್ಕಸ್ ಸ್ಟೋಯ್ನಿಸ್(21), ನಿಕೋಲಸ್ ಪೂರನ್(29) ತಂಡದ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು.

ರಾಜಸ್ಥಾನ ಬೌಲರ್‌ಗಳು ಲಖನೌ ತಂಡವನ್ನು 160ರ ಗಡಿಯಲ್ಲೇ ತಡೆಯುವಲ್ಲಿ ಸಫಲರಾದರು. 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಕಬಳಿಸಿದ ರವಿಚಂದ್ರನ್ ಅಶ್ವಿನ್ ಯಶಸ್ವಿ ಬೌಲರ್ ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.