ಲಖನೌ(ಪಿಟಿಐ): ಮಾರ್ಕ್ ವುಡ್ ಪರಿಣಾಮಕಾರಿ ಬೌಲಿಂಗ್ (14ಕ್ಕೆ 5) ಹಾಗೂ ಕೈಲ್ ಮೇಯರ್ಸ್ ಬಿರುಸಿನ ಅರ್ಧಶತಕದ ಬಲದಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಶನಿವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 50 ರನ್‌ಗಳಿಂದ ಮಣಿಸಿತು.

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೇಯರ್ಸ್ 38 ಎಸೆತಗಳಲ್ಲಿ 73 ರನ್ ಗಳಿಸಿದರು. ಇದರಿಂದಾಗಿ ಲಖನೌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 193 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಡೆಲ್ಲಿ ಪರ ನಾಯಕ ಡೇವಿಡ್ ವಾರ್ನರ್ (56, 48 ಎ, 4X7) ಹಾಗೂ ಮಧ್ಯಮ ಕ್ರಮಾಂಕದಲ್ಲಿ ರಿಲಿ ರೊಸ್ಸೊ (30) ಅವರನ್ನು ಹೊರತುಪಡಿಸಿ ಉಳಿದವರಿಂದ ಉತ್ತಮ ಬ್ಯಾಟಿಂಗ್ ಹೊರಹೊಮ್ಮಲಿಲ್ಲ. ಲಖನೌ ತಂಡದ ಮಾರ್ಕ್, ಆವೇಶ್ ಖಾನ್ (29ಕ್ಕೆ 2) ಮತ್ತು ರವಿ ಬಿಷ್ಣೋಯಿ (31ಕ್ಕೆ 2) ಎದುರಾಳಿ ತಂಡದ ಆಟಗಾರರನ್ನು ಕಟ್ಟಿಹಾಕಿದರು.

ಲಖನೌ ಉತ್ತಮ ಮೊತ್ತ: ಲಖನೌ ತಂಡದ ನಾಯಕ ಕೆ.ಎಲ್. ರಾಹುಲ್ ಅವರೊಂದಿಗೆ ಕೈಲ್ ಇನಿಂಗ್ಸ್ ಅರಂಭಿ ಸಿದರು. ಆದರೆ 4ನೇ ಓವರ್‌ನಲ್ಲಿ ಚೇತನ್ ಸಕಾರಿಯಾ ಎಸೆತದಲ್ಲಿ ರಾಹುಲ್ (8) ಔಟಾದರು.

ಈ ಹಂತದಲ್ಲಿ ಮೇಯರ್ಸ್ ಜೊತೆಗೂಡಿದ ದೀಪಕ್ ಹೂಡಾ (17 ರನ್) ಇನಿಂಗ್ಸ್‌ಗೆ ಬಲ ತುಂಬುವಲ್ಲಿ ಸಹಕರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 79 ರನ್ ಸೇರಿಸಿದರು. ಅದರಲ್ಲಿ ಮೇಯರ್ಸ್ ಅಬ್ಬರವೇ ಜೋರಾಗಿತ್ತು. ಅವರು ಒಟ್ಟು ಏಳು ಸಿಕ್ಸರ್ ಸಿಡಿಸಿದರು. ಕೊನೆಯ ಹಂತದ ಓವರ್‌ಗಳಲ್ಲಿ ನಿಕೊಲಸ್ ಪೂರನ್ 21 ಎಸೆತಗಳಲ್ಲಿ 36 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿ ಸಿದರು.

ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್ ಜೈಂಟ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 193 (ಕೈಲ್ ಮೇಯರ್ಸ್ 73, ದೀಪಕ್ ಹೂಡಾ 17, ಕೃಣಾಲ್ ಪಾಂಡ್ಯ ಔಟಾಗದೆ 15, ಮಾರ್ಕಸ್ ಸ್ಟೊಯಿನಿಸ್ 12, ನಿಕೊಲಸ್ ಪೂರನ್ 36, ಖಲೀಲ್ ಅಹಮದ್ 30ಕ್ಕೆ2, ಚೇತನ ಸಕಾರಿಯಾ 53ಕ್ಕೆ2). ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 143 (ಡೇವಿಡ್ ವಾರ್ನರ್ 56, ರಿಲಿ ರೊಸ್ಸೊ 30, ಅಕ್ಷರ್ ಪಟೇಲ್ 16; ಆವೇಶ್ ಖಾನ್ 29ಕ್ಕೆ 2, ಮಾರ್ಕ್ ವುಡ್ 14ಕ್ಕೆ 5, ರವಿ ಬಿಷ್ಣೋಯಿ 31ಕ್ಕೆ 2). ಫಲಿತಾಂಶ: ಲಖನೌ ಸೂಪರ್‌ಜೈಂಟ್ಸ್‌ಗೆ 50 ರನ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.