ರಾಜಕೋಟ್: ಈ ಬಾರಿಯ ಇರಾನಿ ಟ್ರೋಫಿ ಪಂದ್ಯ, ಏಕದಿನ ವಿಶ್ವಕಪ್ ಮತ್ತು ಅಭ್ಯಾಸ ಪಂದ್ಯಗಳ ನಡುವೆ ‘ಸ್ಯಾಂಡ್‌ವಿಚ್’ ಆಗಿದೆ. ರಣಜಿ ಚಾಂಪಿಯನ್ ಸೌರಾಷ್ಟ್ರ ಮತ್ತು ಭಾರತ ಇತರರ ತಂಡದ ನಡುವೆ ಈ ಪಂದ್ಯ ಭಾನುವಾರ ಆರಂಭವಾಗಲಿದ್ದು ಎಂದಿನ ರೀತಿ ಗಮನ ಸೆಳೆಯುವ ಸಾಧ್ಯತೆ ಕಡಿಮೆ.

ಅನುಭವಿ ಬ್ಯಾಟರ್ ಹನುಮ ವಿಹಾರಿ ಅವರು ಭಾರತ ಇತರರ ತಂಡದ ನಾಯಕರಾಗಿದ್ದರೆ, ಭಾರತ ತಂಡದಲ್ಲಿ ಆಡಿರುವ ವೇಗದ ಬೌಲರ್ ಜೈದೇವ್ ಉನದ್ಕತ್ ಸೌರಾಷ್ಟ್ರ ತಂಡವನ್ನು ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಸಹ ಇದ್ದಾರೆ.

ಭಾರತ ಇತರರ ತಂಡದಲ್ಲಿ ಕನ್ನಡಿಗರಾದ ಬ್ಯಾಟರ್ ಮಯಂಕ್ ಅಗರವಾಲ್ ಮತ್ತು ಮಧ್ಯಮ ವೇಗದ ಬೌಲರ್ ವಿದ್ವತ್ ಕಾವೇರಪ್ಪ ಸ್ಥಾನ ಪಡೆದಿದ್ದಾರೆ.

ಪೂಜಾರ ಮತ್ತು ವಿಹಾರಿ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಮರಳಿ ಸ್ಥಾನ ಪಡೆಯಲು ಈ ಪಂದ್ಯದಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ. ಭಾರತ ಈ ವರ್ಷದ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು ಅವರೂ ತಂಡಕ್ಕೆ ಮರಳಲು ಕಾತರರಾಗಿದ್ದಾರೆ. ಅವರ ಜೊತೆಗೆ ಉನದ್ಕತ್ ಕೂಡ ರಾಷ್ಟ್ರೀಯ ತಂಡಕ್ಕೆ ಮರಳಲು ಗುರಿಹೊಂದಿದ್ದಾರೆ.

ಕಳೆದ ಜುಲೈನಲ್ಲಿ ಪೂಜಾರ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕಡೆಗಣಿಸಲಾಗಿತ್ತು. 35 ವರ್ಷದ ಈ ಆಟಗಾರ ನಂತರ ಸಸೆಕ್ಸ್ ಪರ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇತರರ ತಂಡದಲ್ಲಿ ಪ್ರತಿಭಾನ್ವಿತರಾದ ಕೆ.ಎಸ್.ಭರತ್, ಯಶ್ ಧುಲ್, ಸಾಯಿ ಸುದರ್ಶನ್, ಸರ್ಫರಾಜ್ ಖಾನ್, ಶಮ್ಸ್ ಮುಲಾನಿ ಮೊದಲಾದವರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.