ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಅನುಭವಿ ಆಟಗಾರ ಗೋವಾ ರಾಜ್ಯ ತಂಡವನ್ನು ಸೇರಿಕೊಂಡಿದ್ದಾರೆ.

ವಿಕೆಟ್ಕೀಪರ್, ಬಲಗೈ ಬ್ಯಾಟ್ಸ್ಮನ್ ಅವರನ್ನು ಹೋದ ವರ್ಷದ ರಣಜಿ ಋತುವಿನಲ್ಲಿ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಈಚೆಗೆ ಅವರು ಪರರಾಜ್ಯದ ತಂಡದಲ್ಲಿ ಆಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ (ಕೆಎಸ್ಸಿಎ) ಅನುಮತಿ ಪತ್ರ ಪಡೆದಿದ್ದರು.

ಗೌತಮ್ ಅವರು 94 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 4716 ರನ್ಗಳು ಅವರ ಖಾತೆಯಲ್ಲಿವೆ. ಹತ್ತು ಶತಕ ಮತ್ತು 24 ಅರ್ಧಶತಕಗಳನ್ನು ಗಳಿಸಿದ್ದಾರೆ. 295 ಕ್ಯಾಚ್ ಮತ್ತು 21 ಸ್ಟಂಪಿಂಗ್ಗಳೂ ಅವರ ಖಾತೆಯಲ್ಲಿವೆ. ಕರ್ನಾಟಕವು 2013 ರಿಂದ 2015ರವರೆಗೆ ಎರಡು ಬಾರಿ ರಣಜಿ, ಇರಾನಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದಾಗ ಗೌತಮ್ ತಂಡದಲ್ಲಿದ್ದರು. ಉತ್ತಮವಾಗಿ ಆಡಿದ್ದರು.

‘ಕರ್ನಾಟಕ ತಂಡದಲ್ಲಿ ಸತತ 11 ಋತುಗಳಲ್ಲಿ ಆಡುವ ಅವಕಾಶ ಪಡೆದಿದ್ದೆ.. ಇದೀಗ ಹೊಸ ಸವಾಲು ಎದುರಿಸಲು ಸಜ್ಜಾಗಿದ್ದೇನೆ. ಇದು ಬೇರೆಡೆ ಹೋಗಿ ಆಡಲು ಉತ್ತಮ ಸಮಯ’ ಎಂದು ಗೌತಮ್ ‘ಪ್ರಜಾವಾಣಿ’ಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.