ಬೆಂಗಳೂರು: ಈ ಕಾಲದ ಕ್ರಿಕೆಟಿಗರಲ್ಲಿ ಅಪಾರ ಆತ್ಮವಿಶ್ವಾಸವಿದೆ. ಅದು ಉತ್ತಮವಾದ ಗುಣ. ಆದರೆ ತಮಗೆಲ್ಲವೂ ತಿಳಿದಿದೆ ಎಂಬ ನಕಾರಾತ್ಮಕ ಧೋರಣೆ ಇದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

‘ಐಪಿಎಲ್ ಆರಂಭವಾದಾಗಿನಿಂದ ಅಪಾರ ಹಣ, ಹೆಸರು ಗಳಿಸುತ್ತಿರುವ ಕ್ರಿಕೆಟಿಗರಲ್ಲಿ ದುರಹಂಕಾರ ಬೆಳೆಯುತ್ತಿದೆ. ತಾವೇ ಎಲ್ಲ ಬಲ್ಲವರು ಎಂಬ ಧೋರಣೆ ಹೊಂದಿದ್ದಾರೆ. ತಾವು ಇನ್ನೂ ಕಲಿಯುವುದಿದೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಸುನಿಲ್ ಗಾವಸ್ಕರ್ ಅವರಂತಹ ದಿಗ್ಗಜರು ಲಭ್ಯರಿದ್ದರೂ ಅವರಿಂದ ಸಲಹೆ ಪಡೆಯುವ ಸೌಜನ್ಯವೂ ಕೆಲವರಿಗೆ ಇಲ್ಲ. ಗಾವಸ್ಕರ್ 50 ಕ್ರಿಕೆಟ್ ಋತುಗಳನ್ನು ಕಂಡಿರುವ ಅನುಭವಿ. ಅವರ ಸಲಹೆಯು ಅಮೂಲ್ಯವಾದದ್ದು‘ ಎಂದು ಕಪಿಲ್ 'ದ ವೀಕ್‘ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸಂದರ್ಶನವು ಸೋಮವಾರ ಸಾಮಾಜಿ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಜನರ ಗಮನ ಸೆಳೆದಿದೆ.

ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರು ಹಲವಾರು ಬಾರಿ ತಮ್ಮ ಬ್ಯಾಟಿಂಗ್ ಸುಧಾರಣೆಗೆ ತಮ್ಮ ಬಳಿ ಸಲಹೆ ಪಡೆಯುತ್ತಿದ್ದರು. ಆದರೆ ಈಗಿನವರು ಆ ರೀತಿಯಲ್ಲ ಎಂದು ಇತ್ತೀಚೆಗೆ ಗಾವಸ್ಕರ್ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.