ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅದ್ಭುತ ಯಶಸ್ಸಿನ ಗುರುತಾಗಿ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದ ಸ್ಟ್ಯಾಂಡ್ವೊಂದಕ್ಕೆ ಅವರ ಹೆಸರಿಡಲು ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನಿರ್ಧರಿಸಿದೆ.

ಹಿರಿಯ ಕ್ರಿಕೆಟಿಗರಾದದೆಹಲಿಯ ಬಿಷನ್ಸಿಂಗ್ ಬೇಡಿ ಹಾಗೂ ಮೋಹಿಂದರ್ ಅಮರ್ನಾಥ್ ಹೆಸರಿನಲ್ಲಿ ಈಗಾಗಲೇ ಸ್ಟ್ಯಾಂಡ್ಗಳಿವೆ.ಈ ಇಬ್ಬರೂ ಕ್ರಿಕೆಟಿಗರು ನಿವೃತ್ತಿಯ ನಂತರ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಆದರೆ ಕೊಹ್ಲಿ ಈ ಗೌರವಕ್ಕೆ ಭಾಜನರಾಗುತ್ತಿರುವ ಅತಿ ಕಿರಿಯ ಸಕ್ರಿಯ ಕ್ರಿಕೆಟಿಗ ಎಂಬುದು ಗಮನಾರ್ಹ.

‘ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ಗೆ ನೀಡಿದ ಕೊಡುಗೆ ಡಿಡಿಸಿಎಗೆ ಹೆಮ್ಮೆ ತಂದಿದೆ. ಅಸಾಧಾರಣ ಸಾಧನೆ ಹಾಗೂ ಮುರಿಯಲು ಅಸಾಧ್ಯವಾದ ನಾಯಕತ್ವದ ದಾಖಲೆಗಳನ್ನು ನಿರ್ಮಿಸಿರುವ ಅವರನ್ನು ಗೌರವಿಸಲು ಸಂತಸವೆನಿಸುತ್ತದೆ’ ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.