ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಕ್ರಿಕೆಟ್ ಕಿಚ್ಚು ಹಚ್ಚಲು ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಶುಕ್ರವಾರದಿಂದ ಆರಂಭವಾಗಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಎಂಟನೇ ಆವೃತ್ತಿಯ ಕೆಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಮೈಸೂರು ವಾರಿಯರ್ಸ್ ಮುಖಾಮುಖಿಯಾಗಲಿವೆ. ಈ ಬಾರಿ ಬೆಂಗಳೂರು ತಂಡಕ್ಕೆ ಜೊನಾಥನ್ ರಾಂಗ್ಸೆನ್ ನಾಯಕರಾಗಿದ್ದಾರೆ. ಹರಾಜಿನಲ್ಲಿ ಅವರು ₹ 6 ಲಕ್ಷ ಮೌಲ್ಯ ಗಳಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ‘ಹೀರೊ’ ರೋಹನ್ ಕದಂ, ಮೈಸೂರಿನ ಪ್ರತಿಭಾನ್ವಿತ ಆಟಗಾರ ನಿಕಿನ್ ಜೋಸ್ ಮತ್ತು ವಿ. ಕೌಶಿಕ್ ಅವರು ತಂಡದ ಹೋರಾಟಕ್ಕೆ ಬಲ ತುಂಬುವ ಆಟಗಾರರಾಗಿದ್ದಾರೆ.

ಅನುಭವಿ ಅಮಿತ್ ವರ್ಮಾ ಅವರು ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸುವರು. ಅವರ ಬಳಗದಲ್ಲಿ ಬ್ಯಾಟ್ಸ್ಮನ್ ಅನಿರುದ್ಧ ಜೋಶಿ, ಎಡಗೈ ಸ್ಪಿನ್ನರ್ ಜೆ. ಸುಚಿತ್, ವೈಶಾಖ್ ವಿಜಯಕುಮಾರ್, ರಣಜಿ ಕ್ರಿಕೆಟ್ನಲ್ಲಿ ತಾಳ್ಮೆಯ ಆಟಗಾರನೆಂದೆ ಹೆಸರಾಗಿರುವ ಡಿ. ನಿಶ್ಚಲ್ ಅವರಿದ್ದಾರೆ. ಈ ತಂಡದಲ್ಲಿರುವ ಕೆಲವರು ಐಪಿಎಲ್ನಲ್ಲಿ ಆಡಿರುವ ಅನುಭವಿಗಳಾಗಿದ್ದು, ಬ್ಯಾಟಿಂಗ್ ಬಲ ಹೆಚ್ಚಿದೆ.

ಮಳೆ ಸಾಧ್ಯತೆ: ಹವಾಮಾನ ಇಲಾಖೆಯ ವರದಿಯ ಪ್ರಕಾರ ಶುಕ್ರವಾರದಿಂದ ಐದಾರು ದಿನಗಳವರೆಗೆ ಮಳೆ ಬರುವ ಸಾಧ್ಯತೆ ಇದೆ. ಇದರಿಂದಾಗಿ ಪಂದ್ಯಗಳಿಗೆ ಅಡ್ಡಿಯಾಗಬಹುದು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ವ್ಯವಸ್ಥೆ ಇರುವುದರಿಂದ ಮೈದಾನವನ್ನು ಕೆಲವೇ ನಿಮಿಷಗಳಲ್ಲಿ ಒಣಗಿಸಿ ಪಂದ್ಯಕ್ಕೆ ಸಿದ್ಧ ಮಾಡಬಹುದು ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮೊದಲಿನ ವೇಳಾಪಟ್ಟಿಯಲ್ಲಿದ್ದಂತೆ ಬೆಂಗಳೂರಿನಲ್ಲಿ ಆ 16ರಿಂದ 20ರವರೆಗೆ ಮಾತ್ರ ಪಂದ್ಯಗಳು ನಡೆಯಬೇಕಿತ್ತು. ನಂತರ 22 ರಿಂದ 25ರವರೆಗೆ ಹುಬ್ಬಳ್ಳಿಯಲ್ಲಿ ಪಂದ್ಯಗಳು ಆಯೋಜನೆಗೊಳ್ಳಬೇಕಿತ್ತು. ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಮೈಸೂರಿನಲ್ಲಿ ನಿಗದಿಯಾಗಿದ್ದವು.

ಆದರೆ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಇದೆ. ಆದ್ದರಿಂದ ಅಲ್ಲಿಯ ಪಂದ್ಯಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಆದ್ದರಿಂದ ಇಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ.

ತಂಡಗಳು

ಬೆಂಗಳೂರು ಬ್ಲಾಸ್ಟರ್ಸ್: ಆರ್. ಜೊನಾಥನ್ (ನಾಯಕ), ವಿ. ಕೌಶಿಕ್, ಮನೋಜ್ ಭಾಂಡಗೆ, ರೋಹನ್ ಕದಂ, ಬಿ.ಆರ್. ಶರತ್, ಡಿ.ಭರತ್, ಐ.ಜಿ. ಅನಿಲ್, ಆನಂದ ದೊಡ್ಡಮನಿ, ಅನುರಾಗ್ ಬಾಜಪೇಯಿ ನಿಕಿನ್ ಜೋಸ್, ನಾಗಾಭರತ್, ನಿಶಾಂತ್ ಸಿಂಗ್ ಶೇಕಾವತ್, ಭರತ್ ಧೂರಿ, ಮುತ್ತಣ್ಣ ಚಂದ್ರಶೇಖರ್, ಕಿಶೋರ್ ಕಾಮತ್, ಕುಲದೀಪ್ ಕುಮಾರ್, ರಿಷಿ ಬೋಪಣ್ಣ, ಆದಿತ್ಯ ಗೋಯಲ್, ರೋಹನ್ ರಾಜು, ಕೃಷ್ಣದತ್ತ ಪಾಂಡೆ.

ಮೈಸೂರು ವಾರಿಯರ್ಸ್: ಅಮಿತ್ ವರ್ಮಾ(ನಾಯಕ), ಜೆ. ಸುಚಿತ್, ವೈಶಾಖ್ ವಿಜಯಕುಮಾರ್, ಕೆ.ವಿ. ಸಿದ್ಧಾರ್ಥ್, ಅನಿರುದ್ಧ ಜೋಶಿ, ಕುಶಾಲ್ ಎಂ. ವಾದ್ವಾನಿ, ವಿನಯ್ ಸಾಗರ್, ಎಂ. ವೆಂಕಟೇಶ್, ಶೋಯಬ್ ಮ್ಯಾನೇಜರ್, ಕೆ.ಎಸ್. ದೇವಯ್ಯ, ಸೌರಭ್ ಯಾದವ್, ಎನ್.ವಿ. ಮಂಜೇಶ್ ರೆಡ್ಡಿ, ಪಿ. ಸಂಕಲ್ಪ, ಬಿ.ಯು. ಶಿವಕುಮಾರ್, ರಾಮ್ ಸರಿಕ್ ಯಾದವ್, ಜಯೇಶ್ ಬಾಬು, ಕಿಶನ್ ಬಿದರೆ, ಡಿ. ನಿಶ್ಚಲ್, ಉತ್ತಮ ಅಯ್ಯಪ್ಪ, ಎಲ್. ಆರ್. ಚೇತನ್.

ಮಹಿಳಾ ಕ್ರಿಕೆಟ್ ತಂಡ

ಕೆಪಿಎಲ್ ನಡೆಯುವ ಸಂದರ್ಭದಲ್ಲಿ ಮಹಿಳಾ ಕ್ರಿಕೆಟ್ ತಂಡಗಳಿಗೂ ಅವಕಾಶ ನೀಡಲಾಗಿದೆ. ಮೂರು ತಂಡಗಳು ಆಡಲಿವೆ. ಆ. 18 ರಿಂದ 23ರವರೆಗೆ ಪಂದ್ಯಗಳು ನಡೆಯಲಿವೆ. ಬಳ್ಳಾ ಟಸ್ಕರ್ಸ್, ಬೆಳಗಾವಿ ಪ್ಯಾಂಥರ್ಸ್ ಮತ್ತು ಶಿವಮೊಗ್ಗ ಲಯನ್ಸ್ ಫ್ರ್ಯಾಂಚೈಸ್ಗಳು ಮಹಿಳಾ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತಿವೆ.

ಟಸ್ಕರ್ಸ್ ತಂಡಕ್ಕೆ ಅಂತರರಾಷ್ಟ್ರೀಯ ಆಟಗಾರ್ತಿ ವೇದಾ ಕೃಷ್ಣಮೂರ್ತಿ ನಾಯಕಿಯಾಗಿದ್ದಾರೆ. ಪ್ಯಾಂಥರ್ಸ್ ಮತ್ತು ಶಿವಮೊಗ್ಗ ತಂಡಗಳನ್ನು ಕ್ರಮವಾಗಿ ಕೆ ಜಿ. ದಿವ್ಯಾ ಮತ್ತು ರಕ್ಷಿತಾ ಕೃಷ್ಣಪ್ಪ ಮುನ್ನಡೆ
ಸಲಿದ್ದಾರೆ.

ವೇಳಾಪಟ್ಟಿ: ಆಗಸ್ಟ್ 18 ಬೆಳಗಾವಿ ಪ್ಯಾಂಥರ್ಸ್–ಬಳ್ಳಾರಿ ಟಸ್ಕರ್ಸ್ (ರೇಲ್–ವ್ಹೀಲ್ ಫ್ಯಾಕ್ಟರಿ ಮೈದಾನ),

ಆಗಸ್ಟ್ 19: ಶಿವಮೊಗ್ಗ–ಬೆಳಗಾವಿ (ಆರ್ಆರ್ಎಂಸಿ)

ಆ.20: ಶಿವಮೊಗ್ಗ–ಬಳ್ಳಾರಿ (ಆರ್ಡಬ್ಲ್ಯುಎಫ್)

ಆ. 22: ಶಿವಮೊಗ್ಗ–ಬಳ್ಳಾರಿ (ಆರ್ಆರ್ಎಂಸಿ)

ಆ. 23; ಬೆಳಗಾವಿ–ಬಳ್ಳಾರಿ (ಆರ್ಡಬ್ಲ್ಯುಎಫ್)

ಆ. 23: ಶಿವಮೊಗ್ಗ–ಬೆಳಗಾವಿ (ಆರ್ಡಬ್ಲ್ಯುಎಫ್)

ಎಲ್ಲ ಪಂದ್ಯಗಳು: ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.