ಕೊಲಂಬೋ: ಟೀಮ್ ಇಂಡಿಯಾ ಆಟಗಾರ ಕೃಣಾಲ್ ಪಾಂಡ್ಯಾ ಅವರ ಪ್ರಾಥಮಿಕ ಸಂಪರ್ಕಿತರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದಾಗಿ ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. ಹೀಗಾಗಿ, ಕೊಲಂಬೋದಲ್ಲಿ ಭಾರತ–ಶ್ರೀಲಂಕಾ ನಡುವಣ ಎರಡನೇ ಟಿ–20 ಪಂದ್ಯ ಇಂದು ನಡೆಯುವುದು ಬಹುತೇಕ ಖಚಿತವಾಗಿದೆ.

ನಿನ್ನೆ ಬೆಳಿಗ್ಗೆಯಿಂದಲೇ ಕೃಣಾಲ್ ಪಾಂಡ್ಯಾ ಅವರಿಗೆ ಮೂಗು ಸೋರುವಿಕೆ ಸೇರಿದಂತೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ್ಯಂಟಿಜೆನ್ ಮತ್ತು ಆರ್‌ಟಿಪಿಸಿಆರ್ ಎರಡೂ ಪರೀಕ್ಷೆಗಳಲ್ಲಿ ಪಾಸಿಟಿವ್ ಬಂದಿತ್ತು.

ಬಳಿಕ, ಮಂಗಳವಾರ ಒಂದು ದಿನದ ಮಟ್ಟಿಗೆ ಪಂದ್ಯವನ್ನು ಮುಂದೂಡಲಾಗಿತ್ತು. ತಂಡದ ಸದಸ್ಯರನ್ನು ಕ್ವಾರಂಟೈನ್‌ನಲ್ಲಿ ಇರಿಸಿ 8 ಮಂದಿ ಪ್ರಾಥಮಿಕ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಅವರ ಕೋವಿಡ್ ವರದಿಗಳು ನೆಗೆಟಿವ್ ಬಂದಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ. ಆದರೆ, ಸಂಪರ್ಕಿತರ ಹೆಸರನ್ನು ಬಹಿರಂಗಪಡಿಸಲು ಬಿಸಿಸಿಐ ನಿರಾಕರಿಸಿರುವುದಾಗಿ ಅದು ಹೇಳಿದೆ.

ಪ್ರಾಥಮಿಕ ಸಂಪರ್ಕಿತರ ಕೋವಿಡ್ ವರದಿ ನೆಗೆಟಿವ್ ಬಂದಿರುವುದರಿಂದ ಇಂದು ಎರಡನೇ ಮತ್ತು ನಾಳೆ ಮೂರನೇ ಟಿ–20 ಪಂದ್ಯಕ್ಕೆ ಹಾದಿ ಸುಗಮವಾಗಿದೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.

ಸರಣಿಯ ಮೊದಲ ಪಂದ್ಯ ಜಯಿಸಿರುವ ಶಿಖರ್ ಧವನ್ ನೇತೃತ್ವದ ಭಾರತ ತಂಡ ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.