ಬೆಂಗಳೂರು: ಬಹುನಿರೀಕ್ಷಿತ ಐಸಿಸಿ ಟ್ವೆಂಟಿ-20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 9ನೇ ಆವೃತ್ತಿಯ ಟಿ20 ವಿಶ್ವಕಪ್ಗೆ ವೆಸ್ಟ್ಇಂಡೀಸ್ ಹಾಗೂ ಅಮೆರಿಕ ಅತಿಥ್ಯ ವಹಿಸುತ್ತಿದೆ. ಜೂನ್ 1ರಿಂದ ಆರಂಭವಾಗಿ ಜೂನ್ 29ರವರೆಗೆ ನಡೆಯಲಿದೆ.

2007ರಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಭಾರತ ಜಯಿಸಿತ್ತು. ಅದಾದ ಬಳಿಕ ಚುಟುಕು ವಿಶ್ವಕಪ್ನಲ್ಲಿ ಭಾರತ ಪ್ರಶಸ್ತಿ ಬರ ಎದುರಿಸುತ್ತಿದೆ. ದೇಶದ ಕ್ರಿಕೆಟ್ ಅಭಿಮಾನಿಗಳಿಗಾಗಿ ಈಗ ಮತ್ತೊಂದು ಪ್ರಶಸ್ತಿ ಜಯಿಸುವ ಅವಕಾಶ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಮುಂದಿದೆ. ಏಕೆಂದರೆ ರೋಹಿತ್ ಹಾಗೂ ವಿರಾಟ್ ಪಾಲಿಗೆ ಇದು ಬಹುತೇಕ ಕೊನೆಯ ಅವಕಾಶ ಎಂದೇ ಪರಿಗಣಿಸಲಾಗಿದೆ.

ಟ್ವೆಂಟಿ-20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ವಿರಾಟ್ ಕೂಹ್ಲಿ ಅವರೇ ಮುಂಚೂಣಿಯಲ್ಲಿದ್ದಾರೆ. ರೋಹಿತ್ ಶರ್ಮಾ ಅಗ್ರ 5ರ ಪಟ್ಟಿಯಲ್ಲಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ.

ಟ್ವೆಂಟಿ-20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಸರದಾರರು:

1. ವಿರಾಟ್ ಕೊಹ್ಲಿ: 1,141 ರನ್

ಟ್ವೆಂಟಿ-20 ವಿಶ್ವಕಪ್ನಲ್ಲಿ ಐದು ಬಾರಿ ಭಾರತವನ್ನು ಪ್ರತಿನಿಧಿಸಿರುವ ವಿರಾಟ್ ಕೊಹ್ಲಿ ಈವರೆಗೆ 1,141 ರನ್ ಗಳಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೂ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. 2014ರ ಆವೃತ್ತಿಯಲ್ಲಿ ಕೊಹ್ಲಿ ಒಟ್ಟು 319 ರನ್ ಗಳಿಸಿದ್ದರು. 2016ರಲ್ಲೂ ವಿರಾಟ್ 296 ರನ್ ಕಲೆ ಹಾಕಿದ್ದರು.

2. ಮಹೇಲಾ ಜಯವರ್ಧನೆ: 1,016 ರನ್

ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಎರಡನೇ ಸ್ಥಾನದಲ್ಲಿ ಒಟ್ಟು 1,016 ರನ್ ಗಳಿಸಿದ್ದಾರೆ. ಅಲ್ಲದೆ ಲಂಕಾಗೆ ಚೊಚ್ಚಲ ಟಿ20 ವಿಶ್ವಕಪ್ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

3. ಕ್ರಿಸ್ ಗೇಲ್: 965 ರನ್

'ಯೂನಿವರ್ಸಲ್ ಬಾಸ್' ಖ್ಯಾತಿಯ ವೆಸ್ಟ್ಇಂಡೀಸ್ನ ದಿಗ್ಗಜ ಕ್ರಿಸ್ ಗೇಲ್ ಮೂರನೇ ಸ್ಥಾದಲ್ಲಿದ್ದು, ಒಟ್ಟು 965 ರನ್ ಗಳಿಸಿದ್ದಾರೆ. 2012ರಲ್ಲಿ ವಿಂಡೀಸ್ಗೆ ಚೊಚ್ಚಲ ಪ್ರಶಸ್ತಿ ದೊರಕಿಸಿಕೊಡುವಲ್ಲಿ ಗೇಲ್ ಕೊಡುಗೆ ಮಹತ್ವದೆನಿಸಿತ್ತು.

4. ರೋಹಿತ್ ಶರ್ಮಾ: 963 ರನ್

2007ರಲ್ಲಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿ ಆರಂಭವಾದ ಬಳಿಕ ಎಲ್ಲ ಎಂಟು ಟೂರ್ನಿಗಳಲ್ಲಿ ಭಾಗವಹಿಸಿದ ಆಟಗಾರ ಎನಿಸಿಕೊಂಡಿರುವ ರೋಹಿತ್ ಶರ್ಮಾ, ಈವರೆಗೆ ಒಟ್ಟು 963 ರನ್ ಗಳಿಸಿದ್ದಾರೆ. ಪ್ರಸ್ತುತ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದು, ಕೋಟ್ಯಂತರ ಅಭಿಮಾನಿಗಳ ಕನಸನ್ನು ಹೊತ್ತುಕೊಂಡಿದ್ದಾರೆ.

5. ತಿಲಕರತ್ನೆ ದಿಲ್ಶಾನ್: 897 ರನ್

ಟಾಪ್ 5ರ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಆರಂಭಿಕ ಬ್ಯಾಟರ್ ತಿಲಕರತ್ನೆ ದಿಲ್ಶಾನ್ ಕಾಣಿಸಿಕೊಂಡಿದ್ದಾರೆ. ದಿಲ್ಶಾನ್ 2009ರ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ (317) ಬ್ಯಾಟರ್ ಎನಿಸಿದ್ದರು.

ಸ್ಫೋಟಕ ಬ್ಯಾಟರ್ಗಳು (ಗರಿಷ್ಠ ಸ್ಟ್ರೈಕ್ರೇಟ್):

ಟ್ವೆಂಟಿ-20 ವಿಶ್ವಕಪ್ನಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಗರಿಷ್ಠ ಸ್ಟ್ರೈಕ್ರೇಟ್ ಕಾಪಾಡಿಕೊಂಡಿರುವ ಅಗ್ರ ಐದು ಬ್ಯಾಟರ್ಗಳ ಪಟ್ಟಿ ಇಲ್ಲಿದೆ.

1. ಜೋಸ್ ಬಟ್ಲರ್: 144.48

2. ಎಬಿ ಡಿವಿಲಿಯರ್ಸ್: 143.40

3. ಕ್ರಿಸ್ ಗೇಲ್: 142.75

4. ಮಹೇಲಾ ಜಯವರ್ಧನೆ: 134.74

5. ಡೇವಿಡ್ ವಾರ್ನರ್: 133.22
.T20 WC: ಇದೇ ಮೊದಲ ಬಾರಿ ಅಮೆರಿಕದಲ್ಲಿ ವಿಶ್ವಕಪ್; ಭಾರತದ ವೇಳಾಪಟ್ಟಿ ಇಲ್ಲಿದೆ .T20 World Cup | ಪಂತ್ಗೆ ಭಾರತದ ಪೋಷಾಕು ಧರಿಸುವ ತವಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.