ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ: ಮುರ್ತಾಜಾ, ಸಿದ್ಧೇಶ್‌ ಶತಕ

ಮಹಾರಾಷ್ಟ್ರಕ್ಕೆ ಭಾರೀ ಮುನ್ನಡೆ
Published : 21 ಸೆಪ್ಟೆಂಬರ್ 2024, 14:19 IST
Last Updated : 21 ಸೆಪ್ಟೆಂಬರ್ 2024, 14:19 IST
ಫಾಲೋ ಮಾಡಿ
Comments

ಬೆಂಗಳೂರು: ಮುರ್ತಾಜಾ ಟ್ರಂಕ್ವಾಲ (114;171ಎ, 413, 6x3)) ಮತ್ತು ಸಿದ್ಧೇಶ್ ವೀರ್ (146;221ಎ, 4x12, 6x1)) ಅವರ ಅಮೋಘ ಶತಕಗಳ ಬಲದಿಂದ ಮಹಾರಾಷ್ಟ್ರ ತಂಡವು ಇಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್ ಎದುರು ಎರಡನೇ ಇನಿಂಗ್ಸ್‌ನಲ್ಲೂ ಬೃಹತ್‌ ಮೊತ್ತದತ್ತ ಸಾಗಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ ಮಹಾರಾಷ್ಟ್ರ ತಂಡವು 91 ಓವರ್‌ಗಳಲ್ಲಿ 2 ವಿಕೆಟ್‌ಗೆ 385 ರನ್‌ ಕಲೆಹಾಕಿದೆ. ಮೊದಲ ಇನಿಂಗ್ಸ್‌ನಲ್ಲಿ 260 ರನ್‌ಗಳ ಮುನ್ನಡೆ ಪಡೆದಿದ್ದ ಪ್ರವಾಸಿ ತಂಡವು, ಒಟ್ಟಾಗಿ 645 ರನ್‌ಗಳ ಮುನ್ನಡೆಯೊಂದಿಗೆ ಆತಿಥೇಯ ತಂಡವನ್ನು ಒತ್ತಡಕ್ಕೆ ಸಿಲುಕಿಸಿದೆ.

ಶುಕ್ರವಾರದ ಅಂತ್ಯಕ್ಕೆ 1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಗಳಿಸಿದ್ದ ಮುಂಬೈ ತಂಡವು ಶನಿವಾರ ದಿನಪೂರ್ತಿ ಆತಿಥೇಯ ತಂಡದ ಬೌಲರ್‌ಗಳನ್ನು ಕಾಡಿತು. ಮುರ್ತಾಜಾ ಮತ್ತು ಸಿದ್ದೇಶ್‌ ಅವರು ಮೊದಲ ವಿಕೆಟ್‌ಗೆ 234 ರನ್‌ ಸೇರಿಸಿದರು. ಅರ್ಷಿನ್‌ ಕುಲಕರ್ಣಿ ಔಟಾಗದೇ 80 ಮತ್ತು ಸಚಿನ್‌ ದಾಸ್‌ ಔಟಾಗದೆ 37 ರನ್‌ ಗಳಿಸಿ ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌:

ಆಲೂರು (1): ಮಹಾರಾಷ್ಟ್ರ: 114.5 ಓವರ್‌ಗಳಲ್ಲಿ 421. ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 54.2 ಓವರ್‌ಗಳಲ್ಲಿ 161. ಎರಡನೇ ಇನಿಂಗ್ಸ್: ಮಹಾರಾಷ್ಟ್ರ: 91 ಓವರ್‌ಗಳಲ್ಲಿ 2ಕ್ಕೆ 385 (ಮುರ್ತಾಜಾ ಟ್ರಂಕ್ವಾಲ 114 (ಗಾಯಾಳಾಗಿ ನಿವೃತ್ತಿ), ಸಿದ್ಧೇಶ್ ವೀರ್ 146, ಅರ್ಷಿನ್‌ ಕುಲಕರ್ಣಿ ಔಟಾಗದೇ 80, ಸಚಿನ್‌ ದಾಸ್‌ ಔಟಾಗದೇ 34; ಶಿಖರ್ ಶೆಟ್ಟಿ 70ಕ್ಕೆ 1).

ಚಿನ್ನಸ್ವಾಮಿ ಕ್ರೀಡಾಣಗಣ: ಮಧ್ಯಪ್ರದೇಶ: 118.1 ಓವರ್‌ಗಳಲ್ಲಿ 325. ಬರೋಡಾ: 127.3 ಓವರ್‌ಗಳಲ್ಲಿ 412 (ನಿನಾದ್‌ ರಥ್ವ 114, ಮಹೇಶ್ ಪಿಥಿಯಾ 75; ಕುಲ್ವಂತ್ ಖೇಜ್ರೋಲಿಯಾ 36ಕ್ಕೆ 5)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT