ಗಾಲ್: ಏಂಜೆಲೊ ಮ್ಯಾಥ್ಯೂಸ್ (107; 228 ಎಸೆತ, 11 ಬೌಂಡರಿ) ಅಜೇಯ ಶತಕ ಗಳಿಸಿ ಶ್ರೀಲಂಕಾ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಶುಕ್ರವಾರ ಇಲ್ಲಿ ಆರಂಭಗೊಂಡ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಏಳು ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಲಂಕಾ ತಂಡ ದಿನದಾಟದ ಮುಕ್ತಾಯಕ್ಕೆ ನಾಲ್ಕು ವಿಕೆಟ್ಗಳಿಗೆ 229 ರನ್ ಗಳಿಸಿದೆ.

ಆರಂಭಿಕ ಬ್ಯಾಟ್ಸ್ಮನ್ ಕುಶಲ್ ಪೆರೇರ ಮತ್ತು ಮೂರನೇ ಕ್ರಮಾಂಕದ ಒಶಾಡ ಫರ್ನಾಂಡೊ ಅವರನ್ನು ಒಂದೇ ಓವರ್ನಲ್ಲಿ ಜೇಮ್ಸ್ ಆ್ಯಂಡರ್ಸನ್ ವಾಪಸ್ ಕಳುಹಿಸಿದರು. ಈ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಮ್ಯಾಥ್ಯೂಸ್ ಮೂರನೇ ವಿಕೆಟ್ಗೆ ಲಾಹಿರು ತಿರಿಮನೆ ಜೊತೆಗೂಡಿ 69 ರನ್ ಸೇರಿಸಿದರು. ಮಾರ್ಕ್ ವುಡ್ ಸತತ ಶಾರ್ಟ್ ಬಾಲ್ ಎಸೆದು ಮ್ಯಾಥ್ಯೂಸ್ ಅವರನ್ನು ಕಾಡಿದರು. ಆದರೆ ಮ್ಯಾಥ್ಯೂಸ್ ಎದೆಗುಂದಲಿಲ್ಲ. ಭೋಜನ ವಿರಾಮದ ನಂತರದ ಎರಡನೇ ಎಸೆತದಲ್ಲಿ ತಿರಿಮನೆ ಅವರನ್ನು ಆ್ಯಂಡರ್ಸನ್ ಔಟ್ ಮಾಡಿದರು.

ನಂತರ ಮ್ಯಾಥ್ಯೂಸ್ ಮತ್ತು ದಿನೇಶ್ ಚಾಂದಿಮಲ್ (52; 121 ಎ, 4 ಬೌಂ, 1 ಸಿ) ನಾಲ್ಕನೇ ವಿಕೆಟ್ಗೆ 117 ರನ್ ಸೇರಿಸಿದರು. 20ನೇ ಅರ್ಧಶತಕ ಗಳಿಸಿದ ಚಾಂದಿಮಲ್ ಅವರನ್ನು 69ನೇ ಓವರ್ನಲ್ಲಿ ಮಾರ್ಕ್ ವುಡ್ ಎಲ್ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿದರು. 18 ಓವರ್ಗಳ ವರೆಗೆ ಮ್ಯಾಥ್ಯೂಸ್ ಜೊತೆ ಬ್ಯಾಟಿಂಗ್ ಮಾಡಿದ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ದಿನದಾಟ ಮುಕ್ತಾಯಗೊಂಡಾಗ ಕ್ರೀಸ್ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ ( ಮೊದಲ ಇನಿಂಗ್ಸ್): 87 ಓವರ್ಗಳಲ್ಲಿ 4ಕ್ಕೆ 229 (ಲಾಹಿರು ತಿರಿಮನೆ 43, ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್ 107, ದಿನೇಶ್ ಚಾಂದಿಮಲ್ 52, ನಿರೋಷನ್ ಡಿಕ್ವೆಲಾ ಬ್ಯಾಟಿಂಗ್ 19; ಜೇಮ್ಸ್ ಆ್ಯಂಡರ್ಸನ್ 24ಕ್ಕೆ3, ಮಾರ್ಕ್ ವುಡ್ 47ಕ್ಕೆ1). ಇಂಗ್ಲೆಂಡ್ ಎದುರಿನ ಪಂದ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.