ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರರಿಗೆ ಬಿಡ್ ಈ ತಿಂಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿರುವ ತಂಡಗಳು ತಾವು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿವೆ.

ಪ್ರಮುಖ ಆಟಗಾರರಾದ ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಕರುಣ್ ನಾಯರ್, ದೇವದತ್ತ ಪಡಿಕ್ಕಲ್ ಮತ್ತು ಮಧ್ಯಮ ವೇಗದ ಬೌಲರ್ ವೈಶಾಖ ವಿಜಯಕುಮಾರ್ ಅವರನ್ನು ತಂಡಗಳು ಉಳಿಸಿಕೊಂಡಿವೆ. ಟೂರ್ನಿಯ ಮೂರನೇ ಆವೃತ್ತಿಯು ಆಗಸ್ಟ್ 15ರಿಂದ ಸೆಪ್ಟೆಂಬರ್ 1ರವರೆಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ರನ್ನರ್ಸ್ ಅಪ್ ಮೈಸೂರು ವಾರಿಯರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಆಡಲಿವೆ.

ಉಳಿಕೆ ಆಟಗಾರರು

ಹುಬ್ಬಳ್ಳಿ ಟೈಗರ್ಸ್: ಮನೀಷ್ ಪಾಂಡೆ, ಕೆ.ಎಲ್. ಶ್ರೀಜಿತ್, ಮನವಂತಕುಮಾರ್, ವಿದ್ವತ್ ಕಾವೇರಪ್ಪ.

ಮೈಸೂರು ವಾರಿಯರ್ಸ್: ಕರುಣ್ ನಾಯರ್, ಸಿ.ಎ.ಕಾರ್ತಿಕ್, ಎಸ್.ಯು. ಕಾರ್ತಿಕ್, ಮನೋಜ್ ಬಾಂಢಗೆ.

ಗುಲ್ಬರ್ಗಾ ಮಿಸ್ಟಿಕ್ಸ್: ದೇವದತ್ತ ಪಡಿಕ್ಕಲ್, ವೈಶಾಖ ವಿಜಯಕುಮಾರ್, ಸ್ಮರಣ್ ರವಿ, ಕೆ.ವಿ. ಅನೀಶ್.

ಶಿವಮೊಗ್ಗ ಲಯನ್ಸ್: ಅಭಿನವ್ ಮನೋಹರ್, ನಿಹಾಲ್ ಉಲ್ಲಾಳ, ಶಿವರಾಜ್, ವಾಸುಕಿ ಕೌಶಿಕ್.

ಮಂಗಳೂರು ಡ್ರ್ಯಾಗನ್ಸ್: ನಿಕಿನ್ ಜೋಸ್, ರೋಹನ್ ಪಾಟೀಲ, ಕೆ.ವಿ. ಸಿದ್ಧಾರ್ಥ್, ಪಾರಸ್ ಗುರುಭಕ್ಷ್ ಆರ್ಯ.

ಬೆಂಗಳೂರು ಬ್ಲಾಸ್ಟರ್ಸ್: ಮಯಂಕ್ ಅಗರವಾಲ್, ಸೂರಜ್ ಅಹುಜಾ, ಶುಭಾಂಗ್ ಹೆಗಡೆ, ಮೊಹಸೀನ್ ಖಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.