ಅಡಿಲೇಡ್:ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಹೆಚ್ಚು ರನ್ ಗಳಿಸಿದ ದಾಖಲೆ ವೆಸ್ಟ್‌ಇಂಡೀಸ್ ಕ್ರಿಕೆಟಿಗ ಬ್ರಯಾನ್ ಲಾರಾ ಅವರ ಹೆಸರಿನಲ್ಲಿದೆ. ಈ ದಾಖಲೆಯನ್ನು ಮುರಿಯಲು ನನಗೆ ಮತ್ತೊಂದು ಅವಕಾಶ ಸಿಗಬಹುದು ಎಂದು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿಯಲ್ಲಿ ವಾರ್ನರ್ ಅಜೇಯ ತ್ರಿಶತಕ ಗಳಿಸಿದ್ದರು. ಪಂದ್ಯಕ್ಕೆ ಮಳೆ ಭೀತಿ ಇದ್ದುದರಿಂದ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಇನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರು. ಹಿಗಾಗಿ ಲಾರಾ ದಾಖಲೆ ಸರಿಗಟ್ಟಲು ಇದ್ದ ಅವಕಾಶವನ್ನು ವಾರ್ನರ್ ಕಳೆದುಕೊಂಡಿದ್ದರು. ಅಂದಹಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರು ವರ್ಷಗಳ ಬಳಿಕ ತ್ರಿಶತಕ ದಾಖಲಾಗಿತ್ತು.2016ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿಕನ್ನಡಿಗ ಕರುಣ್ ನಾಯರ್ (303) ಮುನ್ನೂರರ ಗಡಿ ದಾಟಿದ್ದರು.

ಇದನ್ನೂ ಓದಿ:ವೃತ್ತಿ ಜೀವನದ ಮೊದಲ ತ್ರಿಶತಕ ಸಿಡಿಸಿದ ವಾರ್ನರ್

ಇಲ್ಲಿನ ಓವಲ್‌ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ನ ಎರಡನೇ ದಿನದಂದು ವಾರ್ನರ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು.418ಎಸೆತಗಳನ್ನು ಎದುರಿಸಿದ್ದ ಅವರು 39 ಬೌಂಡರಿ ಹಾಗೂ 1ಸಿಕ್ಸರ್ ಸಹಿತಔಟಾಗದೆ 335 ರನ್ ಗಳಿಸಿದ್ದರು. ಅವರಿಗೆ ಮಾರ್ನಸ್ ಲಾಬುಶೇನ್(162) ಉತ್ತಮ ಬೆಂಬಲ ನೀಡಿದ್ದರು. ಇವರ ಬ್ಯಾಟಿಂಗ್ ನೆರವಿನಿಂದ ತಂಡದ ಮೊತ್ತ127 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 589 ರನ್ ಆಗಿದ್ದಾಗ ಡಿಕ್ಲೇರ್ ಮಾಡಿಕೊಳ್ಳಲಾಗಿತ್ತು.ಪೇನ್ ನಿರ್ಧಾರ ಬಗ್ಗೆಕ್ರೀಡಾವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಬ್ಯಾಟಿಂಗ್ ದಂತಕತೆ ಲಾರಾ ಅವರನ್ನು ಭೇಟಿ ಮಾಡಿರುವ ವಾರ್ನರ್, ಲಾರಾ ಜೊತೆಗಿನ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ‘ದಂತಕಥೆಯನ್ನು ಹಿಡಿದಿಟ್ಟುಕೊಳ್ಳುವುದು ಅದ್ಭುತವಾಗಿದೆ. ಲಾರಾ ಅವರ 400 ರನ್ ದಾಖಲೆ ಸರಿಗಟ್ಟಲು, ಬಹುಶಃ ನನಗೆ ಇನ್ನೊಂದು ಅವಕಾಶ ಸಿಗಬಹುದು’ ಎಂದು ಬರೆದುಕೊಂಡಿದ್ದಾರೆ. ಮಾತ್ರವಲ್ಲದೆ, ದಾಖಲೆ ಮುರಿಯುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿದ್ದ ವಾರ್ನರ್,ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಈ ದಾಖಲೆ ಮುರಿಯಬಲ್ಲರು ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಸತತ 14ನೇ ಟೆಸ್ಟ್ ಸೋಲು ಕಂಡ ಪಾಕಿಸ್ತಾನ

ವಾರ್ನರ್‌ಟೆಸ್ಟ್ ಇನಿಂಗ್ಸ್‌ನಅತ್ಯಧಿಕ ವೈಯಕ್ತಿಕ ರನ್ ಗಳಿಸಲಿದ್ದಾರೆಂದು ಭಾವಿಸಿ, ಅವರನ್ನು ಅಭಿನಂದಿಸಲು ಸಜ್ಜಾಗಿದ್ದೆ ಎಂದು ಲಾರಾ ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.