ನಾಗ್ಪುರ: ಅಮೋಘ ಬ್ಯಾಟಿಂಗ್ ಮಾಡಿದ ಯಶ್ ರಾಥೋಡ್ (ಬ್ಯಾಟಿಂಗ್ 97) ಅವರ ನೆರವಿನಿಂದ ವಿದರ್ಭ ತಂಡವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶಕ್ಕೆ ತಿರುಗೇಟು ನೀಡಿದೆ.

ವಿದರ್ಭ ತಂಡವು ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಫೈನಲ್ ತಲುಪಬೇಕೆಂದರೆ ಈ ಪಂದ್ಯದಲ್ಲಿ ಜಯಿಸುವುದೊಂದೇ ತಂಡಕ್ಕೆ ಇರುವ ದಾರಿ.

ಮೂರನೇ ದಿನದಾಟದಲ್ಲಿ ರಾಥೋಡ್ ಮತ್ತು ನಾಯಕ ಅಕ್ಷಯ್ ವಾಡಕರ್ (77; 139ಎ) ದಿಟ್ಟ ಹೋರಾಟ ಮಾಡಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ ಗಳಿಸಿದ 158 ರನ್‌ಗಳಿಂದಾಗಿ ವಿದರ್ಭ ತಂಡವು 261 ರನ್‌ಗಳ ಉತ್ತಮ ಮುನ್ನಡೆ ಸಾಧಿಸಿದೆ.

ಮೂರನೇ ದಿನದಾಟದ ಮುಕ್ತಾಯಕ್ಕೆ ಆತಿಥೇಯ ತಂಡವು 90 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 343 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ವಿದರ್ಭ: 56.4 ಓವರ್‌ಗಳಲ್ಲಿ 170.

ಮಧ್ಯಪ್ರದೇಶ: 94.3 ಓವರ್‌ಗಳಲ್ಲಿ 252 (ಸಾರಾಂಶ್ ಜೈನ್ 30, ಸಾಗರ್ ಸೋಳಂಕಿ 26, ಉಮೇಶ್ ಯಾದವ್ 40ಕ್ಕೆ3, ಯಶ್ ಠಾಕೂರ್ 51ಕ್ಕೆ3, ಅಕ್ಷಯ್ ವಖಾರೆ 68ಕ್ಕೆ2)

ಎರಡನೇ ಇನಿಂಗ್ಸ್

ವಿದರ್ಭ: 90 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 343 (ಧ್ರುವ ಶೋರೆ 40, ಅಮನ್ ಮೊಖಡೆ 59, ಕರುಣ್ ನಾಯರ್ 3, ಯಶ್ ರಾಥೋಡ್ ಬ್ಯಾಟಿಂಗ್ 97, ಅಕ್ಷಯ್ ವಾಡಕರ್ 77, ಆದಿತ್ಯ ಸರವಟೆ ಬ್ಯಾಟಿಂಗ್ 14, ಅನುಭವ್ ಅಗರವಾಲ್ 68ಕ್ಕೆ2, ಕುಮಾರ್ ಕಾರ್ತಿಕೆಯ 73ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.