ಬ್ಲೋಮ್ಫಾಂಟೈನ್: ಐರ್ಲೆಂಡ್ ವಿರುದ್ಧದ ಅಂಡರ್–19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಷೀರ್ ಖಾನ್ ಅವರ ಅಮೋಘ ಶತಕದ ನೆರವಿನಿಂದ ಭಾರತ ತಮಡವು 7 ವಿಕೆಟ್ ಮಷ್ಟಕ್ಕೆ 301 ರನ್ ಕಲೆಹಾಕಿದೆ.

9 ಬೌಂಡರಿ, 4 ಸಿಕ್ಸರ್ ಸಹಿತ 106 ಎಸೆತಗಳಲ್ಲಿ ಮುಷೀರ್ 118 ರನ್ ಸಿಡಿಸಿದರು.

50 ರನ್ನಿಂದ 100ರ ಗಡಿ ದಾಟಲು ಅವರು ಕೇವಲ 34 ಎಸೆತಗಳನ್ನು ತೆಗೆದುಕೊಂಡರು. ಮೊದಲ ಅರ್ಧಶತಕಕ್ಕೆ ಅವರು 66 ಎಸೆತಗಳನ್ನು ಎದುರಿಸಿದ್ದರು. ನಾಯಕ ಉದಯ್ ಸಹರಣ್ ಜೊತೆ ಅವರು 84 ಎಸೆತಗಳಲ್ಲಿ 75 ರನ್ಗಳ ಜೊತೆಯಾಟ ನೀಡಿದರು.

ಅಂತ್ಯದಲ್ಲಿ ಅಬ್ಬರಿಸದ ಸಚಿನ್ ದಾಸ್ 9 ಎಸೆತಗಳಲ್ಲಿ 21 ರನ್ ಸಿಡಿಸಿದರು. ಈ ಮೂಲಕ ತಂಡ 300ರ ಗಡಿ ದಾಟಲು ಸಾಧ್ಯವಾಯಿತು. ಈ ಮೈದಾನದಲ್ಲಿ ಅಂಡರ್–19 ಅಂತರರಾಷ್ಟ್ರೀಯ ಪಂದ್ಯದಲ್ಲಿ ಇದು ಅತ್ಯಧಿಕ ಮೊತ್ತವಾಗಿದೆ.

ಈ ಪಂದ್ಯದಲ್ಲಿ ಭಾರತ ಕೊನೆಯ 10 ಓವರ್ಗಳಲ್ಲಿ 119 ರನ್ ಕಲೆ ಹಾಕಿದೆ.

ಉಳಿದಂತೆ ಉದಯ್ ಸಹರಣ್ 75, ಅರಶಿನ್ ಕುಲಕರ್ಣಿ 32 ರನ್ ಸಿಡಿಸಿದರು.

ಸಂಕ್ಷಿಪ್ತ ಸ್ಕೋರ್:

ಭಾರತ ಅಂಡರ್–19 301/7

* ಮುಷೀರ್ ಖಾನ್ 118

* ಉದಯ್ ಸಹರಣ್ 75

ಬೌಲಿಂಗ್ ಒಲಿವರ್ ರಿಲೇ: 55/3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.