ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್. ಕೆ. ಪ್ರಸಾದ್ ಮತ್ತು ಸದಸ್ಯ ಗಗನ್ ಖೋಡಾ ಅವರ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಆಹ್ವಾನಿಸಿದೆ.

ಈ ಕುರಿತು ನೀಡಿರುವ ಜಾಹೀರಾತಿನಲ್ಲಿ ಆಯ್ಕೆ ಸಮಿತಿಯ ಅವಧಿಯು ನಾಲ್ಕು ವರ್ಷಗಳದ್ದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಸದ್ಯದ ಸಮಿತಿಯಲ್ಲಿರುವ ಶರಣದೀಪ್ ಸಿಂಗ್ (ಉತ್ತರ ವಲಯ), ದೇವಾಂಗ್ ಗಾಂಧಿ (ಪೂರ್ವ ವಲಯ) ಮತ್ತು ಜತಿನ್ ಪರಾಂಜಪೆ (ಪಶ್ಚಿಮ ವಲಯ) ಅವರು ಇನ್ನೂ ಒಂದು ವರ್ಷ ಕಾರ್ಯನಿರ್ವಹಿಸಲಿದ್ದಾರೆ.

ಈ ಸಮಿತಿಯು ಭಾರತ, ಭಾರತ ಎ, ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ಚಾಲೆಂಜರ್ ಸರಣಿ ಮತ್ತು ಇರಾನಿ ಕಪ್ನಲ್ಲಿ ಆಡುವ ಇತರೆ ಭಾರತ ತಂಡಗಳನ್ನು ಆಯ್ಕೆ ಮಾಡುತ್ತದೆ. ಅರ್ಜಿ ಸಲ್ಲಿಸಲು ಇದೇ 24 ಕೊನೆಯ ದಿನವಾಗಿದೆ.

60 ವರ್ಷ ದಾಟಿದವರಿಗೆ ಅವಕಾಶವಿಲ್ಲವೆಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಹಿರಿಯ ಆಟಗಾರ ದಿಲೀಪ್ ವೆಂಗಸರ್ಕಾರ್ (64 ವರ್ಷ) ಅವರಿಗೆ ಅವಕಾಶ ತಪ್ಪಿದಂತಾಗಿದೆ.

ಸೀನಿಯರ್ ತಂಡದ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸುವವರು, ಏಳು ಟೆಸ್ಟ್, 30 ಪ್ರಥಮ ದರ್ಜೆ ಪಂದ್ಯಗಳು ಅಥವಾ 10 ಅಂತರರಾಷ್ಟ್ರೀಯ ಏಕದಿನ ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಆದರೆ, ಅವರು ಎಲ್ಲ ಮಾದರಿಗಳ ಕ್ರಿಕೆಟ್ನಿಂದ ನಿವೃತ್ತರಾಗಿ ಐದು ವರ್ಷ ಪೂರೈಸಿರಬೇಕು.

ಜೂನಿಯರ್ ರಾಷ್ಟ್ರೀಯ ತಂಡ ಮತ್ತು ಮಹಿಳಾ ತಂಡದ ಆಯ್ಕೆ ಸಮಿತಿಗೂ ಅರ್ಜಿ ಸಲ್ಲಿಸಲಾಗಿದೆ. ಮಹಿಳಾ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸುವವರು ಭಾರತ ತಂಡದಲ್ಲಿ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡಿರಬೇಕು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.