ಬೆಂಗಳೂರು: ಏಕದಿನ ವಿಶ್ವಕಪ್ ಫೈನಲ್ ಸೋಲಿನ ನೋವನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಈಗ ಅಭಿಮಾನಿಗಳಿಂದ ದೊರಕಿದ ಅಪಾರ ಪ್ರೀತಿ ಹಾಗೂ ಬೆಂಬಲದಿಂದಾಗಿ ಮತ್ತಷ್ಟು ದೊಡ್ಡ ಕನಸನ್ನು ಗೆಲ್ಲಲು ಪ್ರೇರಣೆ ಪಡೆದಿರುವುದಾಗಿ ಅವರು ತಿಳಿಸಿದರು.

ಅಹಮದಾಬಾದ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಗೆಲುವು ದಾಖಲಿಸಿದ್ದ ಆಸ್ಟ್ರೇಲಿಯಾ ದಾಖಲೆಯ ಆರನೇ ಬಾರಿಗೆ ಟ್ರೋಫಿ ಜಯಿಸಿತ್ತು. ಇದರೊಂದಿಗೆ ತವರು ನೆಲದಲ್ಲಿ ವಿಶ್ವಕಪ್ ಗೆಲ್ಲುವ ಕೋಟ್ಯಂತರ ಭಾರತೀಯರ ಕನಸು ಭಗ್ನಗೊಂಡಿತ್ತು.
.ಅರ್ಜುನ ಪ್ರಶಸ್ತಿಗೆ ಶಮಿ, ಖೇಲ್ ರತ್ನಕ್ಕೆ ಸಾತ್ವಿಕ್–ಚಿರಾಗ್ ಜೋಡಿ ನಾಮನಿರ್ದೇಶನ.ಕ್ರಿಕೆಟ್: ಪ್ರಸಿದ್ಧ ಕೃಷ್ಣ ಹ್ಯಾಟ್ರಿಕ್ .
ಇನ್ಸ್ಟಾಗ್ರಾಂ ಫ್ಯಾನ್ ಪೇಜ್ನಲ್ಲಿ ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ, ವಿಶ್ವಕಪ್ ಸೋಲಿನ ಬಳಿಕ ಏನು ಮಾಡಬೇಕೆಂದು ತೋಚಲಿಲ್ಲ. ನೋವಿನಿಂದ ಹೊರಬರುವುದು ಹೇಗೆ ಎಂದು ತಿಳಿಯಲಿಲ್ಲ. ಮೊದಲ ಕೆಲವು ದಿನಗಳು ತುಂಬಾನೇ ಕಷ್ಟಕರವಾಗಿತ್ತು. ಕುಟುಂಬದೊಂದಿಗೆ ಕಳೆದ ಸಮಯ ಮತ್ತು ಅಭಿಮಾನಿಗಳಿಂದ ಸಿಕ್ಕಿದ ಬೆಂಬಲ ಈ ಕಷ್ಟದ ಸಮಯ ನಿಭಾಯಿಸಲು ನೆರವಾಯಿತು ಎಂದು ಹೇಳಿದ್ದಾರೆ.

ನಾನು 50 ಓವರ್ ಕ್ರಿಕೆಟ್ ನೋಡಿ ಬೆಳೆದು ಬಂದವನು. ಏಕದಿನ ವಿಶ್ವಕಪ್ ಗೆಲ್ಲುವುದು ಅತಿ ದೊಡ್ಡ ಕನಸಾಗಿತ್ತು. ಅಭಿಮಾನಿಗಳೂ ವಿಶ್ವಕಪ್ ಗೆಲ್ಲುವುದನ್ನು ನಿರೀಕ್ಷೆ ಮಾಡಿದ್ದರು. ಆದರೆ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಫೈನಲ್ನಲ್ಲಿ ಸೋಲು ಆಗಿರುವುದು ತುಂಬಾನೇ ನಿರಾಸೆ ಉಂಟು ಮಾಡಿದೆ. ಆದರೆ ಈ ಸೋಲನ್ನು ಅಭಿಮಾನಿಗಳು ಅರ್ಥಮಾಡಿಕೊಂಡಿರುವುದು ಸಮಾಧಾನ ತಂದಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.