ಮಾಲಿ, ಮಾಲ್ಡೀವ್ಸ್: ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಈಚೆಗೆ ಅರ್ಧಕ್ಕೆ ಸ್ಥಗಿತವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾದ ಆಟಗಾರರು ಭಾನುವಾರ ಮಾಲ್ಡೀವ್ಸ್ನಿಂದ ತಮ್ಮ ತವರಿಗೆ ತೆರಳಲಿದ್ಧಾರೆ.

ಐಪಿಎಲ್ನ ಬೇರೆ ಬೇರೆ ತಂಡಗಳಲ್ಲಿ ಆಡಿದ್ದ ಆಟಗಾರರು, ಕೋಚ್ಗಳು ಮತ್ತು ವೀಕ್ಷಕ ವಿವರಣೆಗಾರರು ಈ ಸಮೂಹದಲ್ಲಿದ್ದಾರೆ. ಅವರೆಲ್ಲರೂ ವಿಶೇಷ ವಿಮಾನದಲ್ಲಿ ತವರಿಗೆ ಮರಳಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ಆಸ್ಟ್ರೇಲಿಯಾ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಈಚೆಗೆ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡಿದಾಗ ಮೇ 6ರಂದು ಆಸ್ಟ್ರೇಲಿಯಾ ಆಟಗಾರರರು ಮಾಲ್ಡೀವ್ಸ್ಗೆ ತೆರಳಿದ್ದರು. ಭಾರತದಿಂದ ತನ್ನ ದೇಶಕ್ಕೆ ಬರುವ ವಿಮಾನಗಳನ್ನು ಆಸ್ಟ್ರೇಲಿಯಾ ನಿರ್ಬಂಧಿಸಿದ್ದ ಕಾರಣದಿಂದಾಗಿ ಅವರು ಮಾಲಿಯಲ್ಲಿ ಒಂದು ವಾರ ಇರಲು ನಿರ್ಧರಿಸಿದ್ದರು.

‘ಮೇ 16ರಂದು ಇಲ್ಲಿಂದ ಮಲೇಷ್ಯಾ ಮಾರ್ಗವಾಗಿ ಸಿಡ್ನಿಗೆ ವಿಶೇಷ ವಿಮಾನದಲ್ಲಿ ತೆರಳಲು 38 ಜನರ ಬಳಗವು ಸಿದ್ಧವಾಗಿದೆ. ಅಲ್ಲಿ ತಲುಪಿದ ನಂತರ 14 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕಿದೆ‘ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.

‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿನ ಹೆಜ್ಜೆ ಇಡಲು ಆಸ್ಟ್ರೇಲಿಯಾ ಸರ್ಕಾರದಿಂದ ಹಸಿರು ನಿಶಾನೆಗಾಗಿ ಕಾಯುತ್ತಿವೆ‘ ಎಂದೂ ವರದಿಯಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಆಸ್ಟ್ರೇಲಿಯಾದ ಮೈಕ್ ಹಸ್ಸಿ ಅವರು ಕೋವಿಡ್ ಸೋಂಕಿಗೊಳಗಾದ ಕಾರಣ ಚೆನ್ನೈನಲ್ಲಿಯೇ ಉಳಿದುಕೊಂಡಿದ್ದಾರೆ. ಈಗಲೂ ಅವರು ಕ್ವಾರಂಟೈನ್ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.