ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ರೋಹಿತ್, ಕೊಹ್ಲಿಗೆ ಕೊನೆಯ ಟಿ20 ವಿಶ್ವಕಪ್ ಸಾಧ್ಯತೆ

Published 28 ಜೂನ್ 2024, 9:31 IST
Last Updated 28 ಜೂನ್ 2024, 9:31 IST
ಅಕ್ಷರ ಗಾತ್ರ

ಗಯಾನ: ಶನಿವಾರ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.

2007ರ ವಿಶ್ವಕಪ್ ವಿಜೇತ ಭಾರತ ತಂಡ, ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ. ಒಟ್ಟಾರೆಯಾಗಿ ಮೂರನೇ ಸಲ ಫೈನಲ್‌ಗೇರಿದ ಸಾಧನೆ ಮಾಡಿದೆ. 2014ರಲ್ಲಿ ಭಾರತ ರನ್ನರ್ ಅಪ್ ಆಗಿತ್ತು.

2007 ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ರೋಹಿತ್ ಶರ್ಮಾ, ಈ ಸಲ ಕಪ್ ಗೆಲ್ಲುವ ಗುರಿ ಹೊಂದಿದ್ದಾರೆ. ಮತ್ತೊಂದೆಡೆ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಟ್ರೋಫಿ ಕೊರತೆಯನ್ನು ನೀಗಿಸುವ ತವಕದಲ್ಲಿದ್ದಾರೆ.

ಸುದೀರ್ಘ ಕಾಲದಿಂದ ಭಾರತೀಯ ಕ್ರಿಕೆಟ್‌ನ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ 'ರೋ-ಕೊ' (ರೋಹಿತ್ ಹಾಗೂ ಕೊಹ್ಲಿ) ಪಾಲಿಗೆ ಈ ಬಾರಿ ಕೊನೆಯ ಟಿ20 ವಿಶ್ವಕಪ್ ಎನ್ನಲಾಗುತ್ತಿದೆ.

37 ವರ್ಷದ ರೋಹಿತ್ ಹಾಗೂ 35 ವರ್ಷದ ರೋಹಿತ್ 2026ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆ ಕ್ಷೀಣವೆನಿಸಿದೆ. ಆ ವೇಳೆಯಾಗುವಾಗ ರೋಹಿತ್ 39 ಹಾಗೂ ವಿರಾಟ್ 38ನೇ ವರ್ಷವನ್ನು ದಾಟಲಿದ್ದಾರೆ.

ಹಾಗಾಗಿ ಈ ಬಾರಿ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಯುವ ಕ್ರಿಕೆಟಿಗರಿಗೆ ಹಾದಿ ಬಿಟ್ಟುಕೊಡುವ ಸಾಧ್ಯತೆಯಿದೆ.

ದ್ರಾವಿಡ್‌ಗೆ ಗೆಲುವಿನ ವಿದಾಯ?

ಈ ವಿಶ್ವಕಪ್ ಬಳಿಕ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿ ಮುಕ್ತಾಯವಾಗಲಿದೆ. ಈಗ ದ್ರಾವಿಡ್ ಅವರಿಗೂ ಗೆಲುವಿನ ವಿದಾಯ ಹಾಡುವ ಗುರಿಯನ್ನು ಟೀಮ್ ಇಂಡಿಯಾ ಹೊಂದಿದೆ.

ರೋಹಿತ್ ನಾಯಕತ್ವದಲ್ಲೇ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಹಾಗೂ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋಲನ್ನು ಕಂಡಿತ್ತು. ಆದರೆ ಮೂರನೇ ಅವಕಾಶದಲ್ಲಿ ದ್ರಾವಿಡ್‌ಗೆ ಗೆಲುವಿನ ಉಡುಗೊರೆ ನೀಡುವ ಇರಾದೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT