ಬೆಂಗಳೂರು: ಅಫ್ಗಾನಿಸ್ತಾನ ವಿರುದ್ಧದ ಟಿ 20 ಸರಣಿಗೆ ರಾಷ್ಟ್ರೀಯ ತಂಡಕ್ಕೆ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿರುವುದು ಟಿ20 ವಿಶ್ವಕಪ್ ಸಮೀಪಿಸುತ್ತಿರುವ ದೃಷ್ಟಿಯಿಂದ ಬುದ್ಧಿವಂತ ನಡೆಯಾಗಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಹೇಳಿದ್ದಾರೆ.

14 ತಿಂಗಳ ನಂತರ ರೋಹಿತ್ ಮತ್ತು ಕೊಹ್ಲಿ ಅವರನ್ನು ಭಾರತದ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅವರ ಉಪಸ್ಥಿತಿಯು ತಂಡಕ್ಕೆ ಸಾಕಷ್ಟು ಗಟ್ಟಿತನವನ್ನು ನೀಡುತ್ತದೆ ಎಂದು ರೈನಾ ಹೇಳಿದರು.

‘ಟಿ–20 ವಿಶ್ವಕಪ್ ನಡೆಯುವ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಪಿಚ್‌ಗಳು ಸ್ವಲ್ಪ ಟ್ರಿಕಿ ಆಗಿರುತ್ತವೆ. ಅಲ್ಲಿ ಭಾರತ ತಂಡಕ್ಕೆ ರೋಹಿತ್ ಮತ್ತು ಕೊಹ್ಲಿಯ ಅನುಭವದ ಅಗತ್ಯವಿದೆ. ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 12,000 ರನ್(ಐಪಿಎಲ್ ಸೇರಿ) ಸಮೀಪದಲ್ಲಿದ್ದಾರೆ. ಹಾಗಾಗಿ, ಅವರ ಉಪಸ್ಥಿತಿಯು ಭಾರತದ ಬ್ಯಾಟಿಂಗ್‌ಗೆ ಉತ್ತೇಜನ ನೀಡಲಿದೆ. ಅದು ಖಂಡಿತವಾಗಿಯೂ ಭಾರತ ವಿಶ್ವಕಪ್ ಗೆಲ್ಲುವ ಸಾಧ್ಯತೆಗಳನ್ನು ಉತ್ತಮಗೊಳಿಸುತ್ತದೆ’ ಎಂದು ಜಿಯೊ ಸಂದರ್ಶನದಲ್ಲಿ ರೈನಾ ಹೇಳಿದ್ದಾರೆ.

‘ಏಕದಿನ ವಿಶ್ವಕಪ್‌ನಲ್ಲಿ ಅವರ ಫಾರ್ಮ್ ತುಂಬಾ ಚೆನ್ನಾಗಿತ್ತು. ನಾಯಕನಾಗಿ ರೋಹಿತ್ ಡ್ರೆಸ್ಸಿಂಗ್ ರೂಂ ಅನ್ನು ಹುರಿದುಂಬಿಸುವರು’ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ಆರಂಭಿಕರಾ ಗಿರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯಬೇಕು. ಕೊಹ್ಲಿ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಅವರು ಹೇಳಿದ್ದಾರೆ.

ವಿಶ್ವಕಪ್‌ನಂತಹ ಹೆಚ್ಚಿನ ಒತ್ತಡದ ಪಂದ್ಯಾವಳಿಯಲ್ಲಿ ಗುರಿಯನ್ನು ಬೆನ್ನಟ್ಟುವಾಗ ರೋಹಿತ್, ಕೊಹ್ಲಿಯ ಉಪಸ್ಥಿತಿಯು ಬಹಳ ಮುಖ್ಯವಾಗುತ್ತದೆ ಎಂದಿದ್ದಾರೆ. .

2007 ಮತ್ತು 2011ರಲ್ಲಿ ಕ್ರಮವಾಗಿ ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ರೈನಾ, ರಿಂಕು ಸಿಂಗ್ ಅವರ ಪ್ರಗತಿಯನ್ನು ಕೊಂಡಾಡಿದ್ದಾರೆ.

‘ರಿಂಕು ಅವರು ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಫಿನಿಶರ್ ಆಗಿಯೂ ಗಮನ ಸೆಳೆದಿದ್ದಾರೆ. ಅವರು ನಿರ್ಭೀತ ಕ್ರಿಕೆಟಿಗ’ ಎಂದು ರೈನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.