ಬೆಂಗಳೂರು: ಚತುಷ್ಕೋನ ಏಕದಿನ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆಲ್ಲಲಿ ಭಾರತ ‘ಬಿ’ ತಂಡವು 226 ರನ್ಗಳ ಗುರಿ ಮುಟ್ಟಬೇಕು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ‘ಎ’ ತಂಡವು 50 ಓವರ್ಗಳಲ್ಲಿ 225 ರನ್ ಗಳಿಸಿ ಆಲೌಟ್ ಆಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ‘ಬಿ’ ತಂಡದ ಸಿದ್ಧಾರ್ಥ್ ಕೌಲ್ (24ಕ್ಕೆ2), ನವದೀಪ್ ಸೈನಿ (33ಕ್ಕೆ2) ಮತ್ತು ಶ್ರೇಯಸ್ ಗೋಪಾಲ್ (50ಕ್ಕೆ3) ಮತ್ತು ದೀಪಕ್ ಹೂಡಾ (41ಕ್ಕೆ2) ಅವರು ಉತ್ತಮ ಬೌಲಿಂಗ್ ಮಾಡಿದರು.ಇದರಿಂದಾಗಿ ಆಸ್ಟ್ರೇಲಿಯಾ ಎ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಡಾರ್ಚಿ ಶಾರ್ಟ್ (72 ರನ್) ಮತ್ತು ಉಸ್ಮಾನ್ ಖ್ವಾಜಾ (23 ರನ್) ಮೊದಲ ವಿಕೆಟ್ಗೆ 51 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಆದರೆ, ಅಲೆಕ್ಸ್ ಕ್ಯಾರಿ (53 ರನ್) ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಹರಿಸು ಗರಿಕೆಗಳು ಇದ್ದ ಪಿಚ್ನಲ್ಲಿ ಮಧ್ಯಮವೇಗಿಗಳು ತಮ್ಮ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು. ಹದ ಬಿಸಿಲು ಬಿದ್ದ ನಂತರ ಪಿಚ್ ಬ್ಯಾಟಿಂಗ್ಗೆ ಒಂದಿಷ್ಟು ನೆರವು ನೀಡಲು ಆರಂಭಿಸಿತು. ಆಗ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮಿಂಚಿದರು.

ಸದ್ಯ ಬ್ಯಾಟಿಂಗ್ ಆರಂಭಿಸಿರುವ ಭಾರತ ‘ಬಿ’: 11ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 61ರನ್ ಗಳಿಸಿದೆ( ಮಯಂಕ್ ಆಗರ್ವಾಲ್ 36*, ಶುಭ್ಮನ್ ಗಿಲ್ 9*).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.