ಮುಂಬೈ: ನಿಧಾನಗತಿಯ ಬೌಲಿಂಗ್ಗಾಗಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಮೇಲೆ ₹24 ಲಕ್ಷ ದಂಡ ವಿಧಿಸಲಾಗಿದೆ.

ತಂಡದ ಉಳಿದೆಲ್ಲ ಆಟಗಾರರಿಗೆ ತಲಾ ₹6 ಲಕ್ಷ ಅಥವಾ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ಹೇರಲಾಗಿದೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:IPL 2022: ಮುಂಬೈ ವಿರುದ್ಧ ರಾಹುಲ್ ಕ್ಲಾಸ್ ಆಟ; ಅಮೋಘ ಶತಕ ಸಾಧನೆ

ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಲೋ ಓವರ್ರೇಟ್ಗೆ ಸಂಬಂಧಿಸಿದಂತೆ ರಾಹುಲ್ ದಂಡನೆಗೆ ಒಳಗಾಗಿದ್ದಾರೆ.

ರಾಹುಲ್ ಎರಡನೇ ಬಾರಿಗೆ ಐಪಿಎಲ್ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ₹24 ಲಕ್ಷ ದಂಡ ಹೇರಲಾಗಿದೆ. ಮೊದಲ ಬಾರಿ ಇದೇ ತಪ್ಪಿಗಾಗಿ ₹12 ಲಕ್ಷ ದಂಡ ತೆತ್ತಿದ್ದರು.

ರಾಹುಲ್ ಅಜೇಯ ಶತಕದ ನೆರವಿನಿಂದ ಲಖನೌ ತಂಡವು ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ 36 ರನ್ ಅಂತರದ ಅರ್ಹ ಗೆಲುವು ದಾಖಲಿಸಿತ್ತು. ಈ ಮೂಲಕ ಮುಂಬೈ ಸತತ 8ನೇ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.