ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ನೀತಿಸಂಹಿತೆ ಉಲ್ಲಂಘನೆ: ಹರ್ಷಿತ್ ರಾಣಾ ಒಂದು ಪಂದ್ಯದಿಂದ ಅಮಾನತು

Published 30 ಏಪ್ರಿಲ್ 2024, 14:31 IST
Last Updated 30 ಏಪ್ರಿಲ್ 2024, 14:31 IST
ಅಕ್ಷರ ಗಾತ್ರ

ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೇಗಿ ಹರ್ಷಿತ್ ರಾಣಾ ಅವರಿಗೆ ಪಂದ್ಯದ ಶೇ 100ರಷ್ಟು ಶುಲ್ಕದ ಮೊತ್ತಕ್ಕೆ ಸಮನಾದ ದಂಡ ಹಾಗೂ ಒಂದು ಪಂದ್ಯದಿಂದ ಅಮಾನತು ಮಾಡಲಾಗಿದೆ. ‌

ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಅವರು ಐಪಿಎಲ್ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಈ ದಂಡ ಮತ್ತು ಶಿಕ್ಷೆ ವಿಧಿಸಲಾಗಿದೆ. ಸೋಮವಾರ ನಡೆದ ಪಂದ್ಯದಲ್ಲಿ ರಾಣಾ ಎಸೆತದಲ್ಲಿ ಡೆಲ್ಲಿಯ ಅಭಿಷೇಕ್ ಪೊರೆಲ್ ಔಟಾದರು. ಆಗ ರಾಣಾ ಅವರು  ಅಭಿಷೇಕ್ ಅವರತ್ತ  ಕೈಬೆರಳು ತೋರಿಸಿ ಪೆವಿಲಿಯನ್‌ಗೆ ಹೋಗು ಎಂದು ಸಂಜ್ಞೆ  ಮಾಡಿದರು. ಇದನ್ನು ಅಶಿಸ್ತು ಎಂದು ಪರಿಗಣಿಸಿರುವ ರೆಫರಿ ದಂಡನೆಗೊಳಪಡಿಸಿದ್ದಾರೆ. 

ಇದೇ ಟೂರ್ನಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಮಯಂಕ್ ಅಗರವಾಲ್ ವಿಕೆಟ್ ಪಡೆದಾಗಲೂ ರಾಣಾ ಫ್ಲೈಯಿಂಗ್ ಕಿಸ್ ಮಾಡಿದ್ದರು. ಆಗಲೂ ಅವರಿಗೆ ಪಂದ್ಯದ ಸಂಭಾವನೆಯ ಶೇ 60ರಷ್ಟನ್ನು ದಂಡವಾಗಿ ವಿಧಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT