ಕಾಬೂಲ್ : ಅಫ್ಗಾನಿಸ್ತಾನ ಕ್ರಿಕೆಟ್ ಕುರಿತು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ಹೇಳಿಕೆಗೆ ಆ ದೇಶದ ಆಟಗಾರ ಅಸ್ಗರ್ ಅಫ್ಗನ್ ಕಿಡಿ ಕಾರಿದ್ದಾರೆ.

‘ಸಂಘರ್ಷಪೀಡಿತ ದೇಶ ಅಫ್ಗಾನಿಸ್ತಾನದವರು ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಾಧ್ಯವಾಗಲಿಕ್ಕಿಲ್ಲ‘ ಎಂದು ಪೇನ್ ಹೇಳಿದ್ದರು. ಈ ಕುರಿತು ಆಸ್ಟ್ರೇಲಿಯಾ ಆಟಗಾರನಿಗೆ ಬಹಿರಂಗ ಪತ್ರ ಬರೆದಿರುವ ಅಸ್ಗರ್ ‘ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳದೆ ಬೀಸು ಹೇಳಿಕೆ ನೀಡಬಾರದು‘ ಎಂದಿದ್ದಾರೆ.

ಮಹಿಳೆಯರು ಕ್ರಿಕೆಟ್ ಆಡುವುದಕ್ಕೆ ತಾಲಿಬಾನ್ ನಿಷೇಧ ಹೇರಿದ ನಂತರ, ನವೆಂಬರ್ 27ರಂದು ಹೋಬರ್ಟ್‌ನಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತೆಗೆದುಕೊಂಡಿತ್ತು. ಇದನ್ನು ಬೆಂಬಲಿಸಿದ್ದ ಪೇನ್ ‘ಐಸಿಸಿ ನಡೆಸುವ ಟೂರ್ನಿಗಳಲ್ಲಿ ಆಡಲು ಅಫ್ಗಾನಿಸ್ತಾನದಂತಹ ತಂಡಕ್ಕೆ ಅವಕಾಶ ನೀಡುವುದನ್ನು ನೋಡಲು ಕಷ್ಟ‘ ಎಂದಿದ್ದರು.

‘ತನ್ನ ದೇಶದ ತಂಡವು ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಮಾತ್ರವಲ್ಲದೆ ನಿಯಮಗಳಿಗೆ ಅನುಗುಣವಾಗಿ ಐಸಿಸಿ ಆಯೋಜಿಸುವ ಎಲ್ಲ ಟೂರ್ನಿಗಳಲ್ಲಿ ಆಡುವ ಹಕ್ಕನ್ನು ಹೊಂದಿದೆ‘ ಎಂದು ಅಸ್ಗರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.