ನವದೆಹಲಿ: ಬ್ರಿಜ್‌ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಕುಸ್ತಿಪಟುಗಳು ನ್ಯಾಯಕ್ಕಾಗಿ ಒತ್ತಾಯಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಜಂತರ್‌ಮಂತರ್‌ನಿಂದ ಅವರನ್ನು ಹೊರ ಹಾಕಿದ್ದು, ಕುಸ್ತಿ ಪಟುಗಳ ಮೇಲೆ ಹಲ್ಲೆ, ಎಳೆದಾಟ, ಪ್ರತಿಭಟನೆಗೆ ಅಡ್ಡಿ ಮುಂತಾದ ಕ್ರಮಗಳಿಗೆ ದೇಶದ ಕ್ರೀಡಾಪಟುಗಳು ಅಸಮಾಧಾನ ತೋರ್ಪಡಿಸುತ್ತಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕ್ರಿಕೆಟಿಗ ರಾಬಿನ್ ಉತ್ತಪ್ಪ, ನಮ್ಮ ಕುಸ್ತಿ ಆಟದ ಹೀರೊಗಳ ವಿಷಯದಲ್ಲಿ ಆಗುತ್ತಿರುವುದನ್ನು ಕಂಡು ಅತ್ಯಂತ ದುಃಖವಾಗುತ್ತಿದೆ. ಶಾಂತಿಯುತ ಮಾರ್ಗದ ಮೂಲಕ ಪರಿಹಾರಕ್ಕೆ ಯತ್ನಿಸಬಹುದಿತ್ತು. ಆದಷ್ಟು ಬೇಗ ಅದು ಆಗಲಿ ಎಂದು ಹೇಳಿದ್ದಾರೆ.

ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ಮಂಗಳವಾರ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು. ‘ಮೇ 28ರಂದು ಕುಸ್ತಿಪಟುಗಳ ಮೇಲೆ ಹಲ್ಲೆ ನಡೆದಿರುವುದನ್ನು ಕೇಳಿ ದಿಗಿಲಾಗಿದೆ. ಮಾತುಕತೆ ಮೂಲಕ ಎಂಥ ಸಮಸ್ಯೆ ಯನ್ನೂ ಬಗೆಹರಿಸಲು ಸಾಧ್ಯ. ಕುಸ್ತಿಪಟುಗಳ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಆಶಿಸುತ್ತೇನೆ’ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದರು.

ಬ್ರಿಜ್‌ಭೂಷಣ್ ವಿರುದ್ಧ ಹೋರಾಟ ತೀವ್ರಗೊಳಿಸಿದ್ದ ಕುಸ್ತಿಪಟುಗಳು ಮಂಗಳವಾರ ಹರಿದ್ವಾರಕ್ಕೆ ತೆರಳಿ ಗಂಗಾ ನದಿಯಲ್ಲಿ ತಮ್ಮ ಒಲಿಂಪಿಕ್ಸ್ ಪದಕಗಳನ್ನು ಎಸೆಯಲು ಮುಂದಾಗಿದ್ದರು. ರೈತ ಮುಖಂಡರ ಮಧ್ಯಪ್ರವೇಶದ ಬಳಿಕ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.