ಮುಂಬೈ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಬುಧವಾರ ಇಲ್ಲಿ ನಡೆದ ಸಿಯೆಟ್ ಕ್ರಿಕೆಟ್ ರೇಟಿಂಗ್ ಅವಾರ್ಡ್ಸ್ ಸಮಾರಂಭದಲ್ಲಿ ‘ಅಂತರರಾಷ್ಟ್ರೀಯ ಪುರುಷರ ವರ್ಷದ ಕ್ರಿಕೆಟಿಗ’ ಗೌರವಕ್ಕೆ ಪಾತ್ರರಾದರು. ಭಾರತ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ‘ಜೀವಮಾನದ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ವಿರಾಟ್ ಕೊಹ್ಲಿ ಅವರು ‘ವರ್ಷದ ಏಕದಿನ ಬ್ಯಾಟರ್’ ಪುರಸ್ಕಾರಕ್ಕೆ ಪಾತ್ರರಾದರೆ, ವಿಶ್ವಕಪ್‌ನಲ್ಲಿ 24 ವಿಕೆಟ್ ಪಡೆದು ಮಿಂಚಿದ್ದ ಮೊಹಮ್ಮದ್ ಶಮಿ ‘ವರ್ಷದ ಏಕದಿನ ಬೌಲರ್’ ಗೌರವಕ್ಕೆ ಪಾತ್ರರಾದರು.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 712 ರನ್ ಕಲೆಹಾಕಿದ್ದ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ‘ಪುರುಷರ ವರ್ಷದ ಟೆಸ್ಟ್ ಬ್ಯಾಟರ್’ ಆಗಿ ಪುರಸ್ಕೃತರಾದರು. ಆರ್.ಅಶ್ವಿನ್ ಅವರು ‘ಪುರುಷರ ವರ್ಷದ ಟೆಸ್ಟ್ ಬೌಲರ್’ ಎನಿಸಿದರು.

ಕ್ರೀಡಾ ಆಡಳಿತದಲ್ಲಿ ಶ್ರೇಷ್ಠತೆ ಪುರಸ್ಕಾರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಪ್ರದಾನ ಮಾಡಲಾಯಿತು.

ಕಳೆದ ಸಾಲಿನಲ್ಲಿ ತಮಿಳುನಾಡು ತಂಡವನ್ನು ರಣಜಿ ಫೈನಲ್‌ಗೆ ತಲುಪಿಸಿದ್ದ ಆ ತಂಡದ ನಾಯಕ ಆರ್.ಸಾಯಿಕಿಶೋರ್ ಅವರು ‘ವರ್ಷದ ದೇಶಿಯ ಕ್ರಿಕೆಟಿಗ’ ಗೌರವಕ್ಕೆ ಪಾತ್ರರಾದರು.

ನ್ಯೂಜಿಲೆಂಡ್‌ನ ಟಿಮ್ ಸೌಥಿ ಅವರು ‘ಪುರುಷರ ಟಿ20 ವರ್ಷದ ಬೌಲರ್’ ಪ್ರಶಸ್ತಿ ಪುರಸ್ಕೃತರಾದರು. ಈ ವಿಭಾಗದ ಶ್ರೇಷ್ಠ ಬ್ಯಾಟರ್ ಗೌರವ ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಪಾಲಾಯಿತು.

ಟಿ20 ಮಾದರಿಯಲ್ಲಿ ಭಾರತ ಮಹಿಳಾ ತಂಡವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ್ದಕ್ಕೆ ಹರ್ಮನ್‌ಪ್ರೀತ್ ಕೌರ್ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ಸ್ಮೃತಿ ಮಂದಾನ ಅವರು ‘ವರ್ಷದ ಶ್ರೇಷ್ಠ ಮಹಿಳಾ ಬ್ಯಾಟರ್’ ಗೌರವಕ್ಕೆ ಪಾತ್ರರಾದರು.

ದೀಪ್ತಿ ಶರ್ಮಾ ‘ವರ್ಷದ ಭಾರತೀಯ ಬೌಲರ್’ ಪ್ರಶಸ್ತಿ ಪಡೆದರು. ಮಹಿಳಾ ಟೆಸ್ಟ್ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಶಫಾಲಿ ವರ್ಮಾ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನಲ್ಲಿ ಅವರು 194 ಎಸೆತಗಳಲ್ಲಿ ದ್ವಿಶತಕ ದಾಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.