ಬೆಂಗಳೂರು: ಕ್ರಿಕೆಟ್ ಆಟ ನೋಡುವುದರಿಂದಲೇ ಬಹಳಷ್ಟು ಕಲಿಯಲು ಸಾಧ್ಯ. 1992ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ ಆಡಿದ್ದ ರೀತಿಯನ್ನು ನಕಲು ಮಾಡಿಕೊಂಡೇ ತಾವು ಬೆಳೆದಿದ್ದಾಗಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದರು.

ಬುಧವಾರ ಕ್ರಿಕ್ಉರು ಆ್ಯಪ್ ಲೋಕಾರ್ಪಣೆ ಮಾಡಿದ ಸೆಹ್ವಾಗ್, ‘ಈಗ ಯಾವುದೇ ಯಶಸ್ವಿ ಬ್ಯಾಟ್ಸ್ಮನ್ ಆಟದ ವಿಡಿಯೊಗಳು ಬೇಕಾದಷ್ಟು ಸಿಗುತ್ತವೆ. ಅವುಗಳನ್ನು ನೋಡಿ ಕಲಿಯಬಹುದು. ಆದರೆ ನಾನು ಕಲಿಯುವ ಸಮಯದಲ್ಲಿ ಅಂತಹ ಅವಕಾಶ ಇರಲಿಲ್ಲ. 1992ರ ವಿಶ್ವಕಪ್ ಪಂದ್ಯಗಳಲ್ಲಿ ಸಚಿನ್ ಆಡುತ್ತಿದ್ದ ರೀತಿಯನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಅದನ್ನೇ ನೆನಪಿಟ್ಟುಕೊಟ್ಟು ಅಭ್ಯಾಸ ಮಾಡುತ್ತಿದ್ದೆ. ಬ್ಯಾಕ್ಫುಟ್ ಪಂಚ್, ನೇರ ಡ್ರೈವ್ ಗಳನ್ನು ಕಲಿತಿದ್ದು ಸಚಿನ್ ಅವರನ್ನು ನೋಡಿಯೇ. ನೋಡಿ ಕಲಿಯುವುದು ಒಳ್ಳೆಯ ಅನುಭವ‘ ಎಂದರು.

‘ನಾನು ಕಲಿಯುವ ಸಮಯದಲ್ಲಿ ಆನ್ಲೈನ್ನಲ್ಲಿ ಎಲ್ಲರೊಂದಿಗೆ ಮಾತನಾಡುವ, ವಿಡಿಯೊಗಳನ್ನು ಸುಲಭವಾಗಿ ಪಡೆಯುವ ಅವಕಾಶ ಸಿಕ್ಕಿದ್ದರೆ ಇನ್ನೂ ಬೇಗ ಭಾರತ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಬಹುದಿತ್ತು‘ ಎಂದು ವೀರೂ ಅಭಿಪ್ರಾಯಪಟ್ಟರು.

ಭಾರತ ತಂಡಕ್ಕೆ ಸಚಿನ್ ಜೊತೆಗೆ ಹಲವು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ ಕುರಿತೂ ನೆನಪಿಸಿಕೊಂಡರು.

‘ಆಟದಲ್ಲಿ ಕೌಶಲಗಳಷ್ಟೇ, ಮನೋಬಲವೂ ಮುಖ್ಯವಾಗುತ್ತದೆ. ಮನಸ್ಸು ಸದೃಢವಾಗಿದ್ದರೆ, ಆಟದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಸಂಜಯ್ ಬಾಂಗರ್ ಕೂಡ ಇದೇ ಸಲಹೆಯನ್ನು ನನಗೆ ಕೊಟ್ಟಿದ್ದರು‘ ಎಂದು ನೆನಪಿಸಿಕೊಂಡರು.

ಸೆಹ್ವಾಗ್ ಕ್ರಿಕ್ಉರು ಆ್ಯಪ್ ಸಂಸ್ಥಾಪಕರಾಗಿದ್ದಾರೆ. ಇದರ ಮೂಲಕ ಕ್ರಿಕೆಟ್ ತರಬೇತಿ ನೀಡಲು ಸೆಹ್ವಾಗ್ ಯೋಜನೆ ರೂಪಿಸಿದ್ದಾರೆ. ಅನುಭವಿ ಅಂತರರಾಷ್ಟ್ರೀಯ ಕ್ರಿಕೆಟಿಗರು ಈ ಮೂಲಕ ತರಬೇತಿ ನೀಡಲಿದ್ದಾರೆ.

ದೇಶ, ವಿದೇಶಗಳ ನಗರ, ಗ್ರಾಮೀಣ ಭಾಗದ ಮಕ್ಕಳಿಗೆ ಇದು ಹೆಚ್ಚು ನೆರವಾಗಲಿದೆ ಎಂದು ಸಂಜಯ್ ಬಾಂಗಾರ್ ಆ್ಯಪ್ನ ವಿಡಿಯೋದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.