ಹೈದರಾಬಾದ್: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತಕ್ಕೆ ಬಂದಿಳಿದಿರುವ ಪಾಕಿಸ್ತಾನ ತಂಡ ತನ್ನ ಅಭ್ಯಾಸ ಆರಂಭಿಸಿದೆ. ನೆಟ್ ಅಭ್ಯಾಸದಲ್ಲಿ ಪಾಕಿಸ್ತಾನದ ಬ್ಯಾಟರ್‌ಗಳಗೆ ಬೌಲ್ ಮಾಡುತ್ತಿರುವ 6 ಅಡಿ 9 ಅಂಗುಲ ಎತ್ತರದ 19 ವರ್ಷದೊಳಗಿನ ನಿಶಾಂತ್ ಸರಣು ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಭಾರತಕ್ಕೆ ಬಂದಿಳಿದ 12 ಗಂಟೆಯೊಳಗೆ ಅಭ್ಯಾಸ ಆರಂಭಿಸಿರುವ ಪಾಕಿಸ್ತಾನ ತಂಡಕ್ಕೆ ಹೈದರಾಬಾದ್ ಹುಡುಗ ನಿಶಾಂತ್ ಬೌಲಿಂಗ್ ಮೂಲಕ ನೆರವಾಗುತ್ತಿದ್ದಾರೆ. ಇವರು ಎರಡು ವರ್ಷಗಳ ಹಿಂದೆ 19 ವರ್ಷದೊಳಗಿನ ಕ್ರಿಕೆಟ್ ತಂಡ ಸೇರಿದ್ದಾರೆ.

ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಅಫ್ರಿದಿ ಅವರು ಅಭ್ಯಾಸ ಮುಗಿಸಿದ ನಂತರ ಪಾಕಿಸ್ತಾನದ ಬೌಲಿಂಗ್ ತರಬೇತುದಾರ ಮಾರ್ನ್ ಮಾರ್ಕಲ್ ಅವರು ಅವಕಾಶಕ್ಕಾಗಿ ಕಾದಿದ್ದ ಬೌಲರ್‌ಗಳಲ್ಲಿ ನಿಶಾಂತ್ ಅವರನ್ನು ನೆಟ್ ಬೌಲಿಂಗ್‌ಗಾಗಿ ಆಯ್ಕೆ ಮಾಡಿಕೊಂಡರು.

ನಿಶಾಂತ್ ಇಲ್ಲಿ ಪ್ರತಿ ಗಂಟೆಗೆ 140–150 ಕಿ.ಮೀ. ವೇಗದಲ್ಲಿ ಚಂಡು ಎಸೆಯುತ್ತಿದ್ದಾರೆ. ಇದು ಹ್ಯಾರಿಸ್ ರೌಫ್ ಹಾಗೂ ಶಾಹೀನ್ ಅವರ ಬೌಲಿಂಗ್‌ಗೆ ಸರಿಸಮನಾಗಿದೆ. ತನ್ನ ಇದೇ ವೇಗವನ್ನು ಕಾಯ್ದುಕೊಳ್ಳುವಂತೆ ಪಾಕಿಸ್ತಾನ ತಂಡ ನಿಶಾಂತ್‌ಗೆ ತಿಳಿಸಿದೆ ಎಂದು ವರದಿಯಾಗಿದೆ.

‘ನಾನು ಪ್ರತಿ ಗಂಟೆಗೆ 125ರಿಂದ 130 ಕಿ.ಮೀ. ವೇಗದಲ್ಲಿ ಬೌಲ್ ಮಾಡುತ್ತಿದ್ದೆ. ಮಾರ್ಕಲ್ ಅವರು ವೇಗವನ್ನು ಹೆಚ್ಚಿಸಲು ಹೇಳಿದರು. ಜತೆಗೆ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೂ ನೆಟ್ ಬೌಲ್‌ಗೆ ಲಭ್ಯವಾಗಬಹುದೇ ಎಂದೂ ಕೇಳಿದರು’ ಎಂದು ನಿಶಾಂತ್ ಅನುಭವ ಹಂಚಿಕೊಂಡಿದ್ದಾರೆ.

‘ಕ್ರಿಕೆಟ್‌ನ ಮೂರು ಮಾದರಿಯಲ್ಲೂ ಬೌಲಿಂಗ್ ಪರಿಣತಿ ಹೊಂದಬೇಕು ಎಂಬುದು ನನ್ನ ಗುರಿ. ಸದ್ಯಕ್ಕೆ ಹೈದರಾಬಾದ್‌ನ ಪ್ರಥಮ ದರ್ಜೆ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಬೇಕೆಂದುಕೊಂಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.