ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಟಿಮ್ ಪೇನ್ ಬದಲಿಗೆ ಬೇರೆ ಆಯ್ಕೆಗಳಿಲ್ಲದಿದ್ದರೆ ಸ್ಟೀವ್ ಸ್ಮಿತ್ ನಾಯಕತ್ವವನ್ನು ಮರಳಿ ಪಡೆಯಬಹುದು ಎಂದು ಮಾಜಿ ನಾಯಕ ಇಯಾನ್ ಚಾಪೆಲ್ ಹೇಳಿದ್ದಾರೆ.

ಸ್ಟೀವ್ ಸ್ಮಿತ್ ಚೆಂಡು ವಿರೂಪಗೊಳಿಸಿದ (ಬಾಲ್ ಟ್ಯಾಂಪರಿಂಗ್) ಆರೋಪ ಎದುರಿಸುತ್ತಿರುವ ಆಟಗಾರರಾಗಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ತಂಡ 1–2 ಅಂತರದಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತಿತ್ತು. ಇದರ ಬೆನ್ನಲ್ಲೇ ಟಿಮ್ ಪೇನ್ ನಾಯಕತ್ವ ಮತ್ತು ತಂತ್ರಗಾರಿಕೆಯ ಬಗ್ಗೆ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು.

ಡೇವಿಡ್ ವಾರ್ನರ್ ಅವರಿಗೆ ಜೀವಮಾನದ ನಾಯಕತ್ವ ನಿಷೇಧವಿದ್ದಾಗ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ನಾಯಕನಾಗಲು ಏಕೆ ಅರ್ಹರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಚಾಪೆಲ್, ಚೆಂಡು ವಿರೂಪ ಪ್ರಕರಣದಲ್ಲಿ ಸ್ಮಿತ್ ಅವರ ‘ಅಪರಾಧ’ ಆ ಸಮಯದಲ್ಲಿ ಅವರ ಉಪನಾಯಕ ವಾರ್ನರ್ ಗಿಂತ ದೊಡ್ಡದಾಗಿತ್ತು. ಎಂದು ಹೇಳಿದ್ದಾರೆ.

2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ತಂಡದಿಂದ ಒಂದು ವರ್ಷ, ನಾಯಕತ್ವದಿಂದ ಎರಡು ವರ್ಷ ನಿಷೇಧ ಅನುಭವಿಸಿದ್ದ ಸ್ಮಿತ್, ಸದ್ಯ ಆಸ್ಟ್ರೇಲಿಯಾ ತಂಡದಲ್ಲಿ ಆಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.