ನ್ಯೂಯಾರ್ಕ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ.

ಬೌಲರ್ಗಳು ಸಾಂಘಿಕ ದಾಳಿ ಸಂಘಟಿಸಿದರೆ ನಾಯಕನ ಆಟವಾಡಿದ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಗಳಿಸಿ ಗಮನ ಸೆಳೆದಿದ್ದಾರೆ. ರೋಹಿತ್ 37 ಎಸೆತಗಳಲ್ಲಿ 52 ರನ್ ಗಳಿಸಿ (3 ಸಿಕ್ಸರ್, 4 ಬೌಂಡರಿ) ನಿವೃತ್ತಿ ಹೊಂದಿದರು.

98 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ 12.2 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.

600 ಸಿಕ್ಸರ್...

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 6,00 ಸಿಕ್ಸರ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಈ ದಾಖಲೆ ಬರೆದಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ಗಳ ಪಟ್ಟಿ:

ರೋಹಿತ್ ಶರ್ಮಾ: 600

ಕ್ರಿಸ್ ಗೇಲ್: 553

ಶಾಹೀದ್ ಅಫ್ರಿದಿ: 476

ಬ್ರೆಂಡನ್ ಮೆಕಲಮ್: 398

ಮಾರ್ಟಿನ್ ಗಪ್ಟಿಲ್: 383

ಮಹಿ ದಾಖಲೆ ಮುರಿದ ರೋಹಿತ್...

ಇದು ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಒಲಿದಿರುವ 42ನೇ ಗೆಲುವು ಆಗಿದೆ. ಇದರೊಂದಿಗೆ ಭಾರತದ ಅತ್ಯಂತ ಯಶಸ್ವಿ ಟಿ20 ನಾಯಕ ಎನಿಸಿದ್ದಾರೆ. ಆ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 32 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

4,000 ರನ್ ಸಾಧನೆ...

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ 4,000 ರನ್ಗಳ ಮೈಲಿಗಲ್ಲು ತಲುಪಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

T20I ಕ್ರಿಕೆಟ್ ಅತಿ ಹೆಚ್ಚು ರನ್ ಸರದಾರರು:

ವಿರಾಟ್ ಕೊಹ್ಲಿ: 4,038

ರೋಹಿತ್ ಶರ್ಮಾ: 4,026

ಬಾಬರ್ ಆಜಂ: 4,023

.ದೊಡ್ಡ ಬಿರುಕು, ಟಿ–20ಗೆ ಯೋಗ್ಯವಲ್ಲ: ಅಮೆರಿಕ ಕ್ರಿಕೆಟ್ ಪಿಚ್ಗಳ ಬಗ್ಗೆ ಆತಂಕ.T20 wc| ರೋಹಿತ್ಗೆ ಗಾಯ: ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ಭಾರತಕ್ಕೆ ಹಿನ್ನಡೆ.T20 World Cup | ರೋಹಿತ್ ಶರ್ಮಾ ಅರ್ಧಶತಕ: ಭಾರತ ಶುಭಾರಂಭ.ಕಲಬುರಗಿ ಆಟಗಾರರ ರಾಜ್ಯ ತಂಡದ ಕನಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.