ಮೆಲ್ಬರ್ನ್: ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಜಯಭೇರಿ ಬಾರಿಸಿರುವ ನ್ಯೂಜಿಲೆಂಡ್ ತಂಡವು ಬುಧವಾರ ಅಫ್ಗಾನಿಸ್ತಾನದ ವಿರುದ್ಧ ಸೆಣಸಲಿದೆ.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಒಂದನೇ ಗುಂಪಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿ ಲೆಂಡ್ ತಂಡವು ಸುಲಭ ಜಯದ ನಿರೀಕ್ಷೆಯಲ್ಲಿದೆ.

ಅಫ್ಗಾನಿಸ್ತಾನ ತಂಡವು ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋತಿದೆ. ಚುರುಕಿನ ಫೀಲ್ಡಿಂಗ್‌ಗೆ ಹೆಸರಾಗಿರುವ ನ್ಯೂಜಿಲೆಂಡ್ ತಂಡದ ಎದುರು ಅಫ್ಗಾನಿಸ್ತಾನ ಬ್ಯಾಟರ್‌ಗಳು ರನ್ ಗಳಿಸಲು ವಿಭಿನ್ನ ತಂತ್ರಗಾರಿಕೆ ಅನುಸರಿಸುವುದು ಅನಿವಾರ್ಯ.ರೆಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಉಸ್ಮಾನ್ ಗಣಿ ಹಾಗೂ ಹಜರತ್ ಉಲ್ಲಾ ಝಝೈ ಅವರು ಅಫ್ಗನ್ ತಂಡದ ಬ್ಯಾಟಿಂಗ್‌ನ ಪ್ರಮುಖರಾಗಿದ್ದಾರೆ. ಕಿವೀಸ್ ಬಳಗದ ಅನುಭವಿ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಹಾಗೂ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅವರ ದಾಳಿಯನ್ನು ಎದುರಿಸುವ ಸವಾಲು ಅಫ್ಗನ್ ಬ್ಯಾಟರ್‌ಗಳಿಗಿದೆ.

ಆದರೆ, ಕಿವೀಸ್ ಬ್ಯಾಟರ್‌ಗಳಾದ ಫಿನ್ ಅಲೆನ್, ಡೆವೊನ್ ಕಾನ್ವೆ, ಗ್ಲೆನ್ ಫಿಲಿಪ್ಸ್, ನಾಯಕ ಕೇನ್ ಹಾಗೂ ಜಿಮ್ಮಿ ನಿಶಾಮ್ ಅವರನ್ನು ಕಟ್ಟಿಹಾಕುವ ಕಠಿಣ ಸವಾಲು ಅನುಭವಿ ಸ್ಪಿನ್ನರ್ ರಶೀದ್ ಖಾನ್, ಫಜಲ್‌ಹಕ್ ಫಾರೂಖಿ ಅವರ ಮುಂದಿದೆ.

ಇಂಗ್ಲೆಂಡ್–ಐರ್ಲೆಂಡ್ ಹಣಾಹಣಿ: ವಿಕೆಟ್‌ಕೀಪರ್ ಬ್ಯಾಟರ್ ಜೊಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಮಂಗಳವಾರ ಎಂಸಿಜಿಯಲ್ಲಿ ಐರ್ಲೆಂಡ್ ಎದುರು ಕಣಕ್ಕಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.