ಟ್ರಿನಿಡಾಡ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ನ ವೇಗದ ಬೌಲರ್ ಲಾಕಿ ಫರ್ಗ್ಯೂಸನ್ ನೂತನ ದಾಖಲೆ ಬರೆದಿದ್ದಾರೆ.

ನಾಲ್ಕು ಓವರ್ಗಳಲ್ಲಿ ಮೇಡನ್ ಸಾಧನೆ ಮಾಡಿರುವ ಫರ್ಗ್ಯೂಸನ್ ಒಂದೇ ಒಂದು ರನ್ ಕೂಡ ಬಿಟ್ಟುಕೊಡಲಿಲ್ಲ. ಅಲ್ಲದೆ ಮೂರು ವಿಕೆಟ್ ಪಡೆದಿದ್ದಾರೆ.

ಇನ್ನು ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ನಲ್ಲಿ ಎಲ್ಲ ನಾಲ್ಕು ಓವರ್ಗಳಲ್ಲಿ ಮೇಡನ್ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿದ್ದಾರೆ.

ಈ ಹಿಂದೆ 2021ರ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕೆನಡಾದ ಸಾದ್ ಬಿನ್ ಜಾಫರ್ (4–4–0–2) ಅವರು ಪನಮಾ ವಿರುದ್ಧ ಎಲ್ಲ ನಾಲ್ಕು ಓವರ್ಗಳಲ್ಲಿ ಮೇಡನ್ ಸಾಧನೆ ಮಾಡಿದ್ದರು.

ಫರ್ಗ್ಯೂಸನ್ ಸಾಧನೆ ಹೀಗಿತ್ತು: 4-4-0-3

ಟ್ರೆಂಟ್ ಬೌಲ್ಟ್ ವಿದಾಯ...

'ಸಿ' ಗುಂಪಿನ ಔಪಚಾರಿಕ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ ವಿರುದ್ಧ ಏಳು ವಿಕೆಟ್ ಅಂತದ ಜಯ ಗಳಿಸಿದ ನ್ಯೂಜಿಲೆಂಡ್, ಅಭಿಯಾನ ಕೊನೆಗೊಳಿಸಿತು.

ಫರ್ಗ್ಯೂಸನ್ ದಾಳಿಗೆ ತತ್ತರಿಸಿದ ಪಾಪುವಾ ಕೇವಲ 78 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ತನ್ನ ಕೊನೆಯ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ 14 ರನ್ ತೆತ್ತು ಎರಡು ವಿಕೆಟ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 12.2 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು.
.T20 World Cup 2024: ತಾಲೀಮು ಆರಂಭಿಸಿದ ಭಾರತದ ಆಟಗಾರರು.T20 World Cup 2024: ಪಾಪುವಾ ವಿರುದ್ಧ ನ್ಯೂಜಿಲೆಂಡ್ಗೆ 7 ವಿಕೆಟ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.