ಅಬುಧಾಬಿ: 'ಹ್ಯಾಟ್ರಿಕ್' ಸೇರಿದಂತೆ ಸತತ ನಾಲ್ಕು ವಿಕೆಟ್ ಕಬಳಿಸಿರುವ ಕರ್ಟಿಸ್ ಕ್ಯಾಂಪರ್ ಮಾರಕ ದಾಳಿಯ (26ಕ್ಕೆ 4 ವಿಕೆಟ್) ನೆರವಿನಿಂದ ಐರ್ಲೆಂಡ್ ತಂಡವು ಐಸಿಸಿ ಟ್ವೆಂಟಿ-20 ವಿಶ್ವಕಪ್ನಲ್ಲಿ ಸೋಮವಾರ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಅಬುಧಾಬಿಯಲ್ಲಿ 'ಎ' ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್, ಓಪನರ್ ಮ್ಯಾಕ್ಸ್ ಒಡೌಡ್ ಅರ್ಧಶತಕದ (51) ಹೊರತಾಗಿಯೂ 20 ಓವರ್ಗಳಲ್ಲಿ 106 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.

ಇದನ್ನೂ ಓದಿ:'ಹ್ಯಾಟ್ರಿಕ್' ಸೇರಿದಂತೆ ಸತತ 4 ವಿಕೆಟ್; ಐರ್ಲೆಂಡ್ನ ಕ್ಯಾಂಪರ್ ವಿಶ್ವ ದಾಖಲೆ

ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಕರ್ಟಿಸ್ ಕ್ಯಾಂಪರ್, ಮಾರಕ ದಾಳಿ ಸಂಘಟಿಸಿದರು. ಕ್ಯಾಂಪರ್ಗೆ ತಕ್ಕ ಸಾಥ್ ನೀಡಿದ ಮಾರ್ಕ್ ಅದೇರ್ ಮೂರು ವಿಕೆಟ್ ಪಡೆದು ಮಿಂಚಿದರು. ಪರಿಣಾಮ ನೆದರ್ಲೆಂಡ್ಸ್ನ ಐವರು ಬ್ಯಾಟರ್ಗಳು ಖಾತೆ ತೆರೆಯಲಾಗದೇ ಪೆವಿಲಿಯನ್ಗೆ ಮರಳಿದರು. ಇನ್ನುಳಿದಂತೆ ನಾಯಕ ಸೀಲಾರ್ 21 ರನ್ ಗಳಿಸಿದರು.

ಬಳಿಕ ಸುಲಭ ಗುರಿ ಬೆನ್ನತ್ತಿದ ಐರ್ಲೆಂಡ್, ಪಾಲ್ ಸ್ಟಿರ್ಲಿಂಗ್ (30*) ಹಾಗೂ ಗರೆತ್ ಡಿಲಾನಿ (44) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 15.1 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.