ಮೆಲ್ಬರ್ನ್: ಲೈಂಗಿಕ ಭಾವನೆ ಕೆರಳಿಸುವ ಸಂದೇಶ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಪತಿಯನ್ನು ತಾವು ಕ್ಷಮಿಸಿದ್ದರೂ ಸಮಾಜ ಇನ್ನೂ ಆ ವಿಷಯವನ್ನು ವಿಸ್ತರಿಸುತ್ತ ಸಾಗಿರುವುದು ಬೇಸರ ತಂದಿದೆ ಎಂದು ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ಟಿಮ್ ಪೇನ್ ಪತ್ನಿ ಬೋನಿ ಮ್ಯಾಗ್ಸ್ ಹೇಳಿದ್ದಾರೆ.

2017ರಲ್ಲಿ ತಂಡದ ಸಹ ಸಿಬ್ಬಂದಿ ಮಹಿಳೆಯೊಬ್ಬರಿಗೆ ಸಂದೇಶ ಕಳುಹಿಸಿದ ಪ್ರಕರಣ ಈಚೆಗೆ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪೇನ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ವಿಷಯದ ಕುರಿತು ಮಾತನಾಡಿದ ಬೋನಿ ತಾವು ಪತಿಯನ್ನು ಅಂದೇ ಕ್ಷಮಿಸಿರುವುದಾಗಿ ಹೇಳಿದರು.

2016ರಲ್ಲಿ ಪೇನ್ ಮತ್ತು ಬೋನಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ‘ಲೈಂಗಿಕ ಸಂದೇಶ ಮತ್ತು ಅನಂತರ ಉಂಟಾದ ವಿವಾದವನ್ನು ಕುಟುಂಬದ ವ್ಯಾಪ್ತಿಯಲ್ಲಿ ಮರೆತಿದ್ದು, ಜೀವನ ಸುಗಮವಾಗಿ ಮುಂದೆ ಸಾಗುತ್ತಿದೆ. ಆದರೆ ಸಮಾಜ ಇನ್ನೂ ಅದೇ ವಿಷಯದ ಸುತ್ತ ಗಿರಕಿ ಹೊಡೆಯುತ್ತಿದೆ. ಇದು ಅತ್ಯಂತ ವಿಷಾದದ ಸಂಗತಿ‘ ಎಂದು ಪತಿಯೊಂದಿಗೆ ನ್ಯೂಸ್ ಕಾರ್ಪ್ ಜೊತೆ ಮಾತನಾಡಿದ ಬೋನಿ ಹೇಳಿದರು.

‘ಆರಂಭದಲ್ಲಿ ನನಗೆ ನೋವಾಗಿತ್ತು. ಪತಿ ಮೇಲೆ ನನ್ನ ಸಿಟ್ಟು ತೋರಿಸಿದ್ದೆ. ಜಗಳವೂ ಆಗಿತ್ತು. ಕೆಲವು ದಿನ ಖಿನ್ನಳಾಗಿದ್ದೆ. ಆ ನಂತರ ಇಬ್ಬರೂ ಕುಳಿತು ಮಾತನಾಡಿದೆವು. ಜೊತೆಯಾಗಿ ಸಾಗಲು ನಿರ್ಧರಿಸಿದೆವು. ಅಂದಿನಿಂದ ನಾನು ನಿರಾಳವಾಗಿದ್ದೇನೆ. ಈಗ ಮತ್ತೆ ಮನಸ್ಸು ತಲ್ಲಣಗೊಂಡಿದೆ‘ ಎಂದು ಬೋನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.