ಬೆಂಗಳೂರು: ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ಅವರ ಮುಖಾಮುಖಿಯು ಯಾವಾಗಲೂ ರೋಚಕ ರಸದೌತಣವಾಗಿರುತ್ತಿತ್ತು.

ಆ ಕಾಲಘಟ್ಟದ ಇಬ್ಬರು ಶ್ರೇಷ್ಠ ಆಟಗಾರರಾಗಿದ್ದ ಇಬ್ಬರ ಜಿದ್ದಾಜಿದ್ದಿಯ ಹಲವು ಕಥೆಗಳಿವೆ. ಕೆಲವು ಪಂದ್ಯಗಳಲ್ಲಿ ಸಚಿನ್ ವಿಕೆಟ್ ಪಡೆಯವಲ್ಲಿ ವಾರ್ನ್ ಯಶಸ್ವಿಯಾಗಿದ್ದರು. ಆದರೆ, ಅವರ ಸ್ಪಿನ್ ತಂತ್ರಗಾರಿಕೆಯನ್ನು ಸಮರ್ಥವಾಗಿ ಅರಿತು ಆಡಿದ್ದ ಸಚಿನ್ ಪಾರಮ್ಯ ಸಾಧಿಸಿದ್ದರು. ಸಚಿನ್ ನನಗೆ ಕನಸಿನಲ್ಲಿ ಬರುತ್ತಾರೆ. ನನ್ನ ಎಸೆತಗಳನ್ನು ಬೌಂಡರಿಗಟ್ಟಿದಂತಾಗುತ್ತದೆಯೆಂದು ವಾರ್ನ್ ಹೇಳಿದ್ದಾಗಿ ಒಮ್ಮೆ ವರದಿಯಾಗಿತ್ತು. ಆದರೆ 2010ರಲ್ಲಿ ‘ಇದು ಸುಳ್ಳು. ನಾನದನ್ನು ತಿಳಿಹಾಸ್ಯವಾಗಿ ಹೇಳಿದ್ದೆ. ಸಚಿನ್ ಶ್ರೇಷ್ಠ ಆಟಗಾರ, ಅವರಿಗೆ ಬೌಲಿಂಗ್ ಮಾಡುವ ಸವಾಲನ್ನು ಆನಂದಿಸಿದ್ದೇನೆ. ಆದರೆ ಅವರೆಂದೂ ನನಗೆ ದುಃಸ್ವಪ್ನವಾಗಿ ಕಾಡಿರಲಿಲ್ಲ’ ಎಂದು ವಾರ್ನ್ ಹೇಳಿದ್ದರು.

ಶತಮಾನದ ಎಸೆತ: 1993ರ ಆ್ಯಷಸ್ ಸರಣಿಯಲ್ಲಿ ಶೇನ್ ವಾರ್ನ್ ಪ್ರಯೋಗಿಸಿದ ಸ್ಪಿನ್ಗೆ ಇಂಗ್ಲೆಂಡ್ನ ಮೈಕ್ ಗ್ಯಾಟಿಂಗ್ ಔಟಾಗಿದ್ದರು. ಅದನ್ನು ‘ಶತಮಾನದ ಎಸೆತ’ ಎಂದು ಗೌರವಿಸಲಾಗಿದೆ.

ಬಲಗೈ ಬ್ಯಾಟ್ಸ್ಮನ್ ಗ್ಯಾಟಿಂಗ್ ಅವರಿಗೆ ಹಾಕಿದ್ದ ಎಸೆತವು ಲೆಗ್ಸ್ಟಂಪ್ನಿಂದ ಹೊರಗೆ ನೆಲಸ್ಪರ್ಶ ಮಾಡಿ ಪುಟಿದೆದ್ದು ಅನೂಹ್ಯ ರೀತಿಯಲ್ಲಿ ತಿರುವು ಪಡೆದು ಆಫ್ಸ್ಟಂಪ್ಗೆ ಅಪ್ಪಳಿಸಿತು. ಆ ಕಾಲದ ಶ್ರೇಷ್ಠ ಬ್ಯಾಟರ್ ಗ್ಯಾಟಿಂಗ್ ಅವಾಕ್ಕಾದರು.

ಐಪಿಎಲ್ನಲ್ಲಿ ಸಾಧನೆ:
ಐಪಿಎಲ್ನಲ್ಲಿ 2008ರಿಂದ 2011ರವರೆಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಿದ್ದರು. ಅವರ ನಾಯಕತ್ವದಲ್ಲಿ ತಂಡವು ಒಂದು ಬಾರಿ ಚಾಂಪಿಯನ್ ಕೂಡ ಆಗಿತ್ತು. ಆಟದಿಂದ ದೂರ ಸರಿದ ನಂತರವೂ ಐಪಿಎಲ್ ತಂಡಗಳಿಗೆ ಮೆಂಟರ್ ಆಗಿದ್ದರು. ಅಲ್ಲದೇ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.