ನವದೆಹಲಿ: ಐದನೇ ಸಲ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ಯುವಪಡೆಯು ವೆಸ್ಟ್ ಇಂಡೀಸ್ನಿಂದ ಮಂಗಳವಾರ ಬೆಳಿಗ್ಗೆ ತವರಿಗೆ ಮರಳಿತು.

ಆ್ಯಮಸ್ಟರ್ಡ್ಯಾಂ ಮತ್ತು ದುಬೈ ಮೂಲಕ ಪ್ರಯಾಣ ಮಾಡಿದ ತಂಡವು ಬೆಂಗಳೂರಿಗೆ ಬಂದಿಳಿಯಿತು. ಶನಿವಾರ ನಡೆದ ಫೈನಲ್ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಜಯಭೇರಿ ಬಾರಿಸಿತ್ತು.

ಬುಧವಾರ ಅಹಮದಾಬಾದಿನಲ್ಲಿ ನಡೆಯಲಿರುವ ಭಾರತ, ವೆಸ್ಟ್ ಇಂಡೀಸ್ ನಡುವಣ ಪಂದ್ಯದ ಸಂದರ್ಭದಲ್ಲಿ ಯುವಪಡೆಯನ್ನು ಸನ್ಮಾನಿಸಲು ಬಿಸಿಸಿಐ ಯೋಜಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯು ತಂಡದ ಪ್ರಯಾಣ ವ್ಯವಸ್ಥೆಯನ್ನು ಮಾಡಿತ್ತು. ಎಕಾನಮಿ ಕ್ಲಾಸ್ನಲ್ಲಿ ಯಶ್ ಧುಳ್ ನಾಯಕತ್ವದ ತಂಡವು ಸ್ವದೇಶಕ್ಕೆ ಮರಳಿತು.

ತಂಡದೊಂದಿಗೆ ವೆಸ್ಟ್ ಇಂಡೀಸ್ಗೆ ತೆರಳಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಆಯ್ಕೆ ಸಮಿತಿ ಸದಸ್ಯರು ಮತ್ತು ಐವರು ಕಾಯ್ದಿಟ್ಟ ಆಟಗಾರರೊಂದಿಗೆ ಪ್ರತ್ಯೇಕವಾಗಿ ಪ್ರಯಾಣ ಮಾಡಿ ಭಾರತಕ್ಕೆ ಬಂದರು.

ಟೂರ್ನಿಯ ಲೀಗ್ ಹಂತದಲ್ಲಿ ಐರ್ಲೆಂಡ್ ಎದುರು ಪಂದ್ಯದ ವೇಳೆ ನಾಯಕ ಯಶ್ ಸೇರಿದಂತೆ ಐವರು ಆಟಗಾರರಿಗೆ ಕೋವಿಡ್ ಖಚಿತವಾಗಿತ್ತು. ಪ್ರತ್ಯೇಕವಾಸದಲ್ಲಿದ್ದು ಚಿಕಿತ್ಸೆ ಪಡೆದು ಮರಳಿದ್ದರು. ನಾಕೌಟ್ ಹಂತದಲ್ಲಿ ಅಮೋಘ ಆಟವಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.