ಕೆ ಎಲ್ ರಾಹುಲ್ ಟಿ20 ಕ್ರಿಕೆಟ್ ಪಂದ್ಯಾಟದಲ್ಲಿ ಇತ್ತೀಚೆಗೆ ಬ್ಯಾಟಿಂಗ್ನಲ್ಲಿ ಉತ್ತಮ ಸಾಧನೆ ತೋರುತ್ತಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ನಾಲ್ಕು ಅಂತಾರಾಷ್ಟ್ರಿಯ ಟಿ20 ಪಂದ್ಯಗಳಲ್ಲಿ ರಾಹುಲ್ ಕ್ರಮವಾಗಿ 1, 0, 0 ಮತ್ತು 14 ಸ್ಕೋರ್ ಗಳಿಸಿದ್ದಾರೆ.

ಐದನೇ ಮತ್ತು ಅಂತಿಮ ಟಿ20 ಪಂದ್ಯದಿಂದ ಅವರನ್ನು ಕೈಬಿಡಲಾಗಿದ್ದು, ಆ ಪಂದ್ಯದಲ್ಲಿ ಭಾರತ ತಂಡ 36 ರನ್ಗಳಿಂದ ಗೆಲುವು ಸಾಧಿಸಿದ್ದು, 3-2 ಅಂತರದಲ್ಲಿ ಸರಣಿ ಜಯ ದಾಖಲಿಸಿದೆ.

ಟಿ20 ಪಂದ್ಯದಲ್ಲಿ ಈ ರೀತಿಯಾಗಿ ಕಡಿಮೆ ಸ್ಕೋರ್ ಮಾಡಿರುವುದರಿಂದ ಸಹಜವಾಗಿ ಟೀಕೆ ಕೇಳಿಬಂದಿತ್ತು. ಆದರೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾತ್ರ ರಾಹುಲ್ರನ್ನು ಸಮರ್ಥಿಸಿಕೊಂಡಿದ್ದು, ಓರ್ವ ಆಟಗಾರರ ಬಗ್ಗೆ ಜನರು ಮಾತನಾಡುವಾಗ ನನ್ನ ಮನಸ್ಸಿನಲ್ಲಿ ಈ ಮಾತು ಕೇಳಿಬರುತ್ತದೆ ಎಂದಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯ ಕುರಿತು ಪಿಟಿಐ ವರ್ಚುವಲ್ ಸುದ್ದಿ ಗೋಷ್ಠಿಯಲ್ಲಿ ಹಿಂದಿ ಕವನದ ಮೂಲಕ ರಾಹುಲ್ರನ್ನು ಸಮರ್ಥಿಸಿಕೊಂಡಿದ್ದಾರೆ.

ಜತೆಗೆ ಕ್ರಿಕೆಟ್ ಕುರಿತು ಜನರು ವಿವಿಧ ಮಾತುಗಳನ್ನು ಆಡುತ್ತಾರೆ. ಜನರು ಟೀಕೆಗಳನ್ನು ಕೇಳಲು ಕೂಡ ಇಷ್ಟ ಪಡುತ್ತಾರೆ. ಮತ್ತು ಅದೇ ಹೆಚ್ಚಾಗುತ್ತಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಮ್ಮ ಆಟಗಾರರ ಬಗ್ಗೆ ನಮಗೆ ಗೊತ್ತಿದೆ, ಅಲ್ಲದೆ, ಪಂದ್ಯವನ್ನು ಹೇಗೆ ಸಂಯೋಜಿಸುವುದು, ಆಟಗಾರರ ಫಾರ್ಮ್ ಬಗ್ಗೆ ಮತ್ತು ಅವರ ಮಾನಸಿಕ ಸ್ಥಿತಿ ಬಗ್ಗೆಯೂ ನಾವು ಸಾಕಷ್ಟು ಚಿಂತಿಸುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.