ಅಹಮದಾಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಗದೊಂದು ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕರುಗಳ ಪಟ್ಟಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅಹಮದಾಬಾದ್ನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಈ ಸ್ಮರಣೀಯ ದಾಖಲೆಯನ್ನು ಬರೆದರು.

ವಿರಾಟ್ ಕೊಹ್ಲಿ ಈಗ ಎಂಎಸ್ ಧೋನಿ ಜೊತೆಗೆ ಅತಿ ಹೆಚ್ಚು 60 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ 35 ಗೆಲುವುಗಳನ್ನು ದಾಖಲಿಸಿದ್ದಾರೆ. ಇದು ಕೂಡಾ ದಾಖಲೆಯಾಗಿದೆ.

ಕಳೆದ ಪಂದ್ಯದಲ್ಲಷ್ಟೇ ಧೋನಿ ಹಿಂದಿಕ್ಕಿದ ವಿರಾಟ್, ತವರು ನೆಲದಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಗೌರವಕ್ಕೆ ಭಾಜನವಾಗಿದ್ದರು.

ಇದನ್ನೂ ಓದಿ:IND vs ENG: ಅಂತಿಮ ಟೆಸ್ಟ್ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ವಿರಾಟ್ ಕೊಹ್ಲಿ vs ಎಂಎಸ್ ಧೋನಿ ಟೆಸ್ಟ್ ಕಪ್ತಾನಗಿರಿ:

ವಿರಾಟ್ ಕೊಹ್ಲಿ : ಪಂದ್ಯ: 60*, ಗೆಲುವು: 35, ಸೋಲು: 14, ಡ್ರಾ: 10,
(ಈ ಪಂದ್ಯದ ಫಲಿತಾಂಶ ಇನ್ನಷ್ಟೇ ದಾಖಲಾಗಬೇಕಿದೆ.)

ಎಂಎಸ್ ಧೋನಿ : ಪಂದ್ಯ: 60, ಗೆಲುವು: 27, ಸೋಲು: 18, ಡ್ರಾ: 15,

ಜೋ ರೂಟ್ 50...
ಏತನ್ಮಧ್ಯೆ ನಾಯಕರಾಗಿ ಇಂಗ್ಲೆಂಡ್ ತಂಡವನ್ನು 50 ಪಂದ್ಯಗಳಲ್ಲಿ ಮುನ್ನಡೆಸಿದ ಗೌರವಕ್ಕೆ ಜೋ ರೂಟ್ ಪಾತ್ರವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.