ಕಿಂಗ್ಸ್‌ಟನ್: ಶುಕ್ರವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣಎರಡನೇ ಟೆಸ್ಟ್ ಆರಂಭಕ್ಕೂ ಪಂದ್ಯಪೂರ್ವ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವೇಳೆ ಸರ್ ವಿವಿಯನ್ ರಿಚರ್ಡ್ಸ್ ಅವರು ಅಸ್ವಸ್ಥರಾದರು.

ಟೆಸ್ಟ್ ಸರಣಿಯ ಅಧಿಕೃತ ಪ್ರಸಾರ ಸಂಸ್ಥೆಯಾಗಿರುವ ಸೋನಿ ವಾಹಿನಿಗೆ ಅವರು ಕಾಮೆಂಟೆಟರ್ ಆಗಿದ್ದಾರೆ. 67 ವರ್ಷದ ಅವರು ಪಂದ್ಯದ ಕುರಿತು ಮಾಹಿತಿಗಳ ಬಗ್ಗೆ ಮಾತನಾಡುವಾಗಲೇ ಅಸ್ವಸ್ಥರಾದರು.

ಅವರನ್ನು ಇಬ್ಬರು ಸಹಾಯಕರ ನೆರವಿನಿಂದ ಸ್ಟ್ರೆಚರ್ ಮೇಲೆ ಕ್ರೀಡಾಂಗಣದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಎಲ್ಲ ತಪಾಸಣೆಗಳನ್ನು ಮಾಡಿದ ನಂತರ ಅವರನ್ನು ವಿಂಡೀಸ್ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ವಿಶ್ರಾಂತಿ ಪಡೆಯಲು ಇರಿಸಲಾಗಿದೆ. ಅಲ್ಲಿಯೇ ಎಲ್ಲ ಆರೈಕೆಗಳನ್ನು ನೀಡಲಾಗುತ್ತಿದೆ.

‘ವಿಂಡೀಸ್‌ನಲ್ಲಿ ವಿಪರೀತ ಉಷ್ಣಾಂಶವಿದ್ದು ಅವರು ಸುಸ್ತಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.