ಬ್ರಿಜ್ಟೌನ್: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಇಂಗ್ಲೆಂಡ್, ಇದೀಗ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ಸೋಲಿನ ಮುಖಭಂಗಕ್ಕೊಳಗಾಗಿದೆ.

ಮಳೆ ಬಾಧಿತ ಅಂತಿಮ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ನಾಲ್ಕು ವಿಕೆಟ್ ಅಂತರದಲ್ಲಿ ಗೆಲುವು ದಾಖಲಿಸಿದ ವಿಂಡೀಸ್, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.

ಮೊದಲ ಪಂದ್ಯದಲ್ಲಿ ವಿಂಡೀಸ್ 4 ವಿಕೆಟ್ ಅಂತರದ ಗೆಲುವು ದಾಖಲಿಸಿದ್ದರೆ, ದ್ವಿತೀಯ ಏಕದಿನದಲ್ಲಿ ಇಂಗ್ಲೆಂಡ್ ಆರು ವಿಕೆಟ್ ಅಂತರದ ಜಯ ಗಳಿಸಿತ್ತು.

ಬಾರ್ಬಡಾಸ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮಳೆ ಅಡ್ಡಿಯಾಗಿದ್ದರಿಂದ ಓವರ್ಗಳ ಸಂಖ್ಯೆಯನ್ನು ಮೊದಲು 43 ಬಳಿಕ 40ಕ್ಕೆ ಇಳಿಸಲಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಆಂಗ್ಲರ ಪಡೆ ಒಂಬತ್ತು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.

ಬೆನ್ ಡಕೆಟ್ ಗರಿಷ್ಠ 71 ರನ್ ಗಳಿಸಿದರು. ಲಿಯಾಮ್ ಲಿವಿಂಗ್ಸ್ಟೋನ್ 45 ರನ್ಗಳ ಕಾಣಿಕೆ ನೀಡಿದರು. ನಾಯಕ ಜೋಸ್ ಬಟ್ಲರ್ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು.

ವಿಂಡೀಸ್ ಇನಿಂಗ್ಸ್ ವೇಳೆಯಲ್ಲೂ ಮಳೆ ಸುರಿದ ಪರಿಣಾಮ 34 ಓವರ್ಗಳಲ್ಲಿ 188 ರನ್ಗಳ ಗುರಿ ಮರು ನಿಗದಿಪಡಿಸಲಾಯಿತು. ಕೀಸಿ ಕಾರ್ಟಿ (50), ಅಲಿಕ್ ಅಥನೇಜ್ (45), ರೊಮಾರಿಯೊ ಶೆಫರ್ಡ್ (41*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ವಿಂಡೀಸ್ 31.4 ಓವರ್ಗಳಲ್ಲಿ ಆರು ವಿಕೆಟ್ ಗುರಿ ತಲುಪಿತು. ಈ ಪೈಕಿ ಕೊನೆ ಹಂತದಲ್ಲಿ ಶೆಫರ್ಡ್ ಕೇವಲ 28 ಎಸೆತಗಳಲ್ಲಿ 41 ರನ್ (ತಲಾ 3 ಸಿಕ್ಸರ್ ಹಾಗೂ ಬೌಂಡರಿ) ಗಳಿಸಿ ಮಿಂಚಿದರು.

ಚೊಚ್ಚಲ ಪಂದ್ಯವನ್ನಾಡಿದ ಮ್ಯಾಥ್ಯೂ ಫೋರ್ಡ್ 29ಕ್ಕೆ ಮೂರು ವಿಕೆಟ್ ಹಾಗೂ ಕೊನೆಯಲ್ಲಿ ಅಜೇಯ 13 ರನ್ ಗಳಿಸಿ ವಿಂಡೀಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.