ಕರಾಚಿ (ಪಿಟಿಐ): ‘ನನ್ನ ವಿವಾಹ ಸಮಾರಂಭಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರರಿಗೂ ಆಹ್ವಾನ ನೀಡುತ್ತೇನೆ’ ಎಂದು ಪಾಕಿಸ್ತಾನದ ಕ್ರಿಕೆಟಿಗ ಹಸನ್ ಅಲಿ ಹೇಳಿದ್ದಾರೆ.

ಹಸನ್ ಅವರು ಆಗಸ್ಟ್ 20ರಂದು ದುಬೈಯ ಹೋಟೆಲ್ವೊಂದರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದ ಸಮಿಯಾ ಆರ್ಜೂ ಅವರನ್ನು ವರಿಸಲಿದ್ದಾರೆ.

ಹರಿಯಾಣದ ಸಮಿಯಾ, ಗುರುಗ್ರಾಮದ ಮಾನವ್ ರಚನಾ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್. ಪದವಿ ಪಡೆದಿದ್ದಾರೆ. ಎಮಿರೇಟ್ಸ್ ವಿಮಾನಯಾನ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿ ಕೆಲಸಮಾಡುತ್ತಿರುವ ಅವರು ದುಬೈಯಲ್ಲಿ ನೆಲೆಸಿದ್ದಾರೆ. ಅವರ ಕುಟುಂಬದವರು ನವದೆಹಲಿಯಲ್ಲಿ ವಾಸವಿದ್ದಾರೆ.

‘ಭಾರತ ತಂಡದ ಆಟಗಾರರಿಗೂ ಆಮಂತ್ರಣ ಪತ್ರಿಕೆ ನೀಡುತ್ತೇನೆ. ಕೆಲವರಾದರೂ ಮದುವೆ ಸಮಾರಂಭದಲ್ಲಿ ಭಾಗಿಯಾದರೆ ತುಂಬಾ ಖುಷಿಯಾಗುತ್ತದೆ. ಪಂದ್ಯಗಳ ವೇಳೆ ಮಾತ್ರ ನಾವು ಎದುರಾಳಿಗಳು. ಅಂಗಳದ ಹೊರಗೆ ಎಲ್ಲರೂ ಸ್ನೇಹಿತರಂತೆ ಇರುತ್ತೇವೆ’ ಎಂದು ಅಲಿ ಹೇಳಿದ್ದಾರೆ.

‘ಮದುವೆಯ ವಿಷಯವನ್ನು ರಹಸ್ಯವಾಗಿಡಬೇಕೆಂದು ಎರಡು ಕುಟುಂಬದವರೂ ತೀರ್ಮಾನಿಸಿದ್ದೆವು. ಕೆಲ ಮಾಧ್ಯಮಗಳಲ್ಲಿ ಈಗಾಗಲೇ ಸುದ್ದಿ ಬಿತ್ತರವಾಗಿದ್ದರಿಂದ ಈ ವಿಚಾರವನ್ನು ಈಗ ಬಹಿರಂಗಪಡಿಸುತ್ತಿದ್ದೇನೆ. ಆಗಸ್ಟ್ 20 ರಂದು ‘ನಿಕಾ’ ನಡೆಯಲಿದೆ. ವಿವಾಹದ ನಂತರ ನಾವು ನನ್ನ ತವರೂರು ಗುಜ್ರಾನ್ವಾಲಾದಲ್ಲಿ ನೆಲೆಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.