ದಂಬುಲಾ: ಆರಂಭ ಆಟಗಾರ್ತಿ ಮುರ್ಷಿದಾ ಖಾತುನ್ (80, 59ಎ) ಮತ್ತು ನಾಯಕಿ ನಿಗರ್ ಸುಲ್ತಾನಾ (ಔಟಾಗದೇ 62, 37ಎ, 4x5, 6x2) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ತಂಡ ಮಹಿಳೆಯರ ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಬುಧವಾರ ಮಲೇಷ್ಯಾ ತಂಡವನ್ನು 114 ರನ್ಗಳಿಂದ ನಿರಾಯಾಸವಾಗಿ ಸೋಲಿಸಿ ಸೆಮಿಫೈನಲ್ ತಲುಪಿತು.

ಈ ಏಕಪಕ್ಷೀಯ ಪಂದ್ಯದ ಗೆಲುವಿನಿಂದ ಬಾಂಗ್ಲಾದೇಶ ‘ಬಿ’ ಗುಂಪಿನಲ್ಲಿ ಎಲ್ಲ ಮೂರು ಪಂದ್ಯಗಳನ್ನು ಆಡಿದ್ದು ನಾಲ್ಕು ಪಾಯಿಂಟ್ಗಳೊಡನೆ ಎರಡನೇ ಸ್ಥಾನಗಳಿಸಿತು.

ಟಾಸ್ ಗೆದ್ದು ಪಿಚ್ನ ಮೊದಲ ಉಪಯೋಗ ಪಡೆದ ಬಾಂಗ್ಲಾದೇಶ 2 ವಿಕೆಟ್ಗೆ 191 ರನ್ಗಳ ಭಾರಿ ಮೊತ್ತ ಪೇರಿಸಿತು. ಇದು ಟಿ20ಯಲ್ಲಿ ಬಾಂಗ್ಲಾದೇಶದ ಎರಡನೇ ಅತ್ಯಧಿಕ ಮೊತ್ತ. ಮಲೇಷ್ಯಾ ವನಿತೆಯರು ಪ್ರತಿರೋಧ ತೋರದೇ 8 ವಿಕೆಟ್ಗೆ 77 ರನ್ಗಳೊಡನೆ ಓವರುಗಳನ್ನು ಮುಗಿಸಿದರು.

ಮುರ್ಷಿದಾ ಮೊದಲ ವಿಕೆಟ್ಗೆ ದಿಲಾರಾ ಅಖ್ತರ್ (33) ಜೊತೆ 46 ಎಸೆತಗಳಲ್ಲಿ 65 ರನ್ ಸೇರಿಸಿದರು. ಮುರ್ಷಿದಾ ಮತ್ತು ಸುಲ್ತಾನಾ ನಡುವೆ ಎರಡನೇ ವಿಕೆಟ್ಗೆ ಕೇವಲ 55 ಎಸೆತಗಳಲ್ಲಿ 91 ರನ್ಗಳು ಹರಿದುಬಂದು ಬಾಂಗ್ಲಾದೇಶಕ್ಕೆ ಮೇಲುಗೈ ಸಾಧಿಸಿತು. ಒಂದು ಸಿಕ್ಸರ್, ಹತ್ತು ಬೌಂಡರಿ ಸಿಡಿಸಿದ ಮುರ್ಷಿದಾ ಪಂದ್ಯದ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರು:

ಬಾಂಗ್ಲಾದೇಶ: 20 ಓವರುಗಳಲ್ಲಿ 2 ವಿಕೆಟ್ಗೆ 191 (ದಿಲಾರಾ ಆಖ್ತರ್ 33, ಮುರ್ಷಿದಾ ಖಾತುನ್ 80, ನಿಗರ್ ಸುಲ್ತಾನಾ ಔಟಾಗದೇ 62);

ಮಲೇಷ್ಯಾ: 20 ಓವರುಗಳಲ್ಲಿ 8 ವಿಕೆಟ್ಗೆ 77 (ಎಲಿಸಾ ಹಂಟರ್ 20, ಮಹಿರಾ ಇಸ್ಮಾಯಿಲ್ 15; ನಹೀದಾ ಅಖ್ತರ್ 13ಕ್ಕೆ2).

ಫಲಿತಾಂಶ: ಬಾಂಗ್ಲಾದೇಶಕ್ಕೆ 114 ರನ್ಗಳ ಗೆಲುವು

ನಾಲ್ಕರ ಘಟ್ಟ ಪ್ರವೇಶಿಸಿದ ಶ್ರೀಲಂಕಾ, ಥಾಯ್ಲೆಂಡ್ಗೆ ಸೋಲು

ದಂಬುಲಾ (ಪಿಟಿಐ): ಚಾಮರಿ ಅಟಪಟ್ಟು ನಾಯಕತ್ವದ ಶ್ರೀಲಂಕಾ ಮಹಿಳೆಯರ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.

ಬುಧವಾರ ಇಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ 10 ವಿಕೆಟ್ಗಳಿಂದ ಥಾಯ್ಲೆಂಡ್ ಎದುರು ಸುಲಭ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು.

ಟಾಸ್ ಗೆದ್ದ ಥಾಯ್ಲೆಂಡ್ ತಂಡದ ನಾಯಕಿ ತಿಪಾಚಾ ಪುತಾವಾಂಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನೆನ್ನಪಾಟ್ ಕೊಂಚಾರೆಂಕಾಯ್ (ಔಟಾಗದೆ 47; 53ಎ, 4X5) ಅವರೊಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ವಿಫಲರಾದರು. ಇದರಿಂದಾಗಿ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 93 ರನ್ಗಳ ಅಲ್ಪಮೊತ್ತ ಗಳಿಸಿತು.

ಗುರಿ ಬೆನ್ನಟ್ಟಿದ ಲಂಕಾ ತಂಡದ ಆರಂಭಿಕ ಜೋಡಿ ವಿಶ್ಮಿ ಗುಣರತ್ನೆ ಮತ್ತು ಚಾಮರಿ ಅಟಪಟ್ಟು ಅವರು ತಂಡವನ್ನು ಸುಲಭವಾಗಿ ಗೆಲುವಿನ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರು: ಥಾಯ್ಲೆಂಡ್: 20 ಓವರ್ಗಳಲ್ಲಿ 7ಕ್ಕೆ 93 (ನೆನ್ನಪಾಟ ಕೊಂಚಾರೆಂಕಾಯ್ 47, ಕವೀಶಾ ದಿಲಹರಿ 13ಕ್ಕೆ2) ಶ್ರೀಲಂಕಾ: 11.3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 94 (ವಿಶ್ಮಿ ಗಣರತ್ನೆ ಔಟಾಗದೆ 39, ಚಾಮರಿ ಅಟಪಟ್ಟು ಔಟಾಗದೆ 49) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 10 ವಿಕೆಟ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.