ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Women's T20 World Cup| ಸನಾ ಆಲ್‌ರೌಂಡ್‌ ಆಟ: ಪಾಕ್‌ಗೆ ಮಣಿದ ಶ್ರೀಲಂಕಾ

Published : 3 ಅಕ್ಟೋಬರ್ 2024, 23:04 IST
Last Updated : 3 ಅಕ್ಟೋಬರ್ 2024, 23:04 IST
ಫಾಲೋ ಮಾಡಿ
Comments

ಶಾರ್ಜಾ: ಫಾತಿಮಾ ಸನಾ (30 ರನ್‌, 10ಕ್ಕೆ 2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಪಾಕಿಸ್ತಾನ ಮಹಿಳೆಯರ ಕ್ರಿಕೆಟ್ ತಂಡವು ಗುರುವಾರ 31 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕ್ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಲಂಕಾ ಬೌಲರ್‌ಗಳು ನಿಖರ ದಾಳಿ ನಡೆಸಿ, ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದರು.

ಪಾಕ್‌ ತಂಡವು 20 ಓವರ್‌ಗಳಲ್ಲಿ 116 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಫಾತಿಮಾ ಮತ್ತು ನಿದಾ ಧಾರ್ (23; 22ಎ) ಅವರ ಆಟದಿಂದಾಗಿ ತಂಡವು ಮೂರಂಕಿ ಮೊತ್ತ ಗಳಿಸಿತ್ತು. ಲಂಕಾದ ಉದೇಶಿಕಾ ಪ್ರಭೋದಿನಿ, ಸುಗಂಧಿಕಾ ಕುಮಾರಿ ಮತ್ತು ಚಾಮರಿ ಅಟಪಟ್ಟು ಅವರು ತಲಾ 3 ವಿಕೆಟ್ ಗಳಿಸಿದರು.

ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡಕ್ಕೆ ಫಾತಿಮಾ ಆರಂಭದಲ್ಲೇ ಪೆಟ್ಟು ನೀಡಿದರು. 6 ರನ್‌ ಗಳಿಸಿದ್ದ ನಾಯಕಿ ಚಾಮರಿ ಅಟಪಟ್ಟು ಅವರ ವಿಕೆಟ್‌ ಪಡೆದು ಸಂಭ್ರಮಿಸಿದರು. ನಂತರ ಬಂದ ಬ್ಯಾಟರ್‌ಗಳೂ ನಿರಾಸೆ ಮೂಡಿಸಿದರು. 22 ರನ್‌ ಗಳಿಸಿದ ನೀಲಕ್ಷಿಕಾ ದಯಯಂತಿ ಲಂಕಾ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 85 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು. ಸಾದಿಯಾ ಇಕ್ಬಾಲ್ ಮೂರು ವಿಕೆಟ್‌ ಪಡೆದರೆ, ಒಮೈಮಾ ಸೊಹೈಲ್ ಮತ್ತು ನಶ್ರಾ ಸಂಧು ತಲಾ ಎರಡು ವಿಕೆಟ್‌ ಗಳಿಸಿದರು

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 116 (ನಿದಾ ಧಾರ್ 23, ಫಾತಿಮಾ ಸನಾ 30, ಒಮೈಮಾ ಸೊಹೈಲ್ 18; ಪ್ರಭೋದಿನಿ 20ಕ್ಕೆ3, ಸುಗಂಧಿಕಾ ಕುಮಾರಿ 19ಕ್ಕೆ3, ಚಾಮರಿ ಅಟಪಟ್ಟು 18ಕ್ಕೆ3). ಶ್ರೀಲಂಕಾ: 20 ಓವರ್‌ಗಳಲ್ಲಿ 9ಕ್ಕೆ 85 (ವಿಶ್ಮಿ ಗುಣರತ್ನೆ 20, ನೀಲಕ್ಷಿಕಾ ದಯಯಂತಿ 22; ಫಾತಿಮಾ ಸನಾ 10ಕ್ಕೆ 2, ಸಾದಿಯಾ ಇಕ್ಬಾಲ್ 17ಕ್ಕೆ 3, ಒಮೈಮಾ ಸೊಹೈಲ್ 17ಕ್ಕೆ 2, ನಶ್ರಾ ಸಂಧು ‌15ಕ್ಕೆ 2). ಫಲಿತಾಂಶ: ಪಾಕಿಸ್ತಾನಕ್ಕೆ 31 ರನ್‌ ಜಯ. ಪಂದ್ಯದ ಆಟಗಾರ್ತಿ: ಫಾತಿಮಾ ಸನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT