ಬರ್ಮಿಂಗಂ (ಪಿಟಿಐ): ‘ಆಲ್ರೌಂಡರ್ ವಿಜಯ ಶಂಕರ್ಗೆ ಮತ್ತೊಂದು ಅವಕಾಶ ನೀಡಿ. ಇಂಗ್ಲೆಂಡ್ ಎದುರಿನ ಪಂದ್ಯದಿಂದ ಅವರನ್ನು ಕೈಬಿಡಬೇಡಿ’ ಎಂದು ಇಂಗ್ಲೆಂಡ್ನ ಹಿರಿಯ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಸಲಹೆ ನೀಡಿದ್ದಾರೆ.

‘ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿಯವರೇ, ದಯವಿಟ್ಟು ವಿಜಯ ಶಂಕರ್ಗೆ ಅವಕಾಶ ಕೊಡಿ. ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಅವರು ಖಂಡಿತವಾಗಿಯೂ ಮಿಂಚುತ್ತಾರೆ. ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ’ ಎಂದು ಕೆವಿನ್ ಟ್ವೀಟ್ ಮಾಡಿದ್ದಾರೆ.

‘ರಿಷಭ್ ಪಂತ್ಗೆ ಅವಕಾಶ ನೀಡಲು ಇದು ಸಕಾಲವಲ್ಲ. ವಿಶ್ವಕಪ್ ಪಂದ್ಯ ಆಡಲು ಅವರು ಸಮರ್ಥರಾಗಿಲ್ಲ. ಟೂರ್ನಿಗೆ ಸಜ್ಜಾಗಲು ಪಂತ್ಗೆ ಇನ್ನೂ ಮೂರು ವಾರ ಬೇಕಾಗುತ್ತದೆ’ ಎಂದಿದ್ದಾರೆ.

ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ವಿಜಯ ಶಂಕರ್ ಈ ಬಾರಿಯ ಟೂರ್ನಿಯಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಅಫ್ಗಾನಿಸ್ತಾನ ಎದುರು 29ರನ್ ಗಳಿಸಿದ್ದ ಅವರು ವೆಸ್ಟ್ ಇಂಡೀಸ್ ವಿರುದ್ಧದ ಹಣಾಹಣಿಯಲ್ಲಿ ಕೇವಲ 14ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.